ಪಿವಿ ವಿಶೇಷ

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ 2 ನೇ ವಾರ್ಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 113 ಹೆಚ್ಚು ಮತಗಳ ಅಂತರದಿಂದ ಜುಲ್ಫಿಕರ್ ಅಹಮ್ಮದ್ ಜಯ ಭೇರಿ….

ಶಾರುಕ್ ಖಾನ್ ಹನೂರು

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ 25/2/2023 ರಂದು ನಡೆದ ಉಪಚುನಾವಣೆ ಗೆ ಇಂದು ಹನೂರು ತಾಲೂಕಿನ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ಕಾರ್ಯಕ್ರಮ ನಡೆಯಿತು ಇದರಲ್ಲಿ ಜೆಡಿಎಸ್ ಅಭ್ಯರ್ಥಿ ಜವಾದ್ ಬೇಗ್ 249,ಬಿಜೆಪಿ ಬೆಂಬಲಿತ ಅಭ್ಯರ್ಥಿ ನಂಜುಡ ಸ್ವಾಮಿ 252,ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜುಲ್ಫಿಕರ್ ಅಹಮ್ಮದ್ 365 ಹಾಗೂ ತಿರಸ್ಕೃತ ಗೊಂಡ ಮತಗಳು 11 ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜುಲ್ಫಿಕರ್ ಅಹಮ್ಮದ್ 113 ಹೆಚ್ಚು ಮತಗಳನ್ನು ಪಡೆದು ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಸೋಲಿಸಿ ಜುಲ್ಫಿಕರ್ ಅಹಮ್ಮದ್ ಜಯ ಭೇರಿ ಬಾರಿಸಿದ್ದಾರೆ.ಇದೆ ಸಂಧರ್ಭದಲ್ಲಿ ಮಾತನಾಡಿದ ಜುಲ್ಫಿಕರ್ ಅಹಮ್ಮದ್ ಅನ್ಯ ಪಕ್ಷದವರು ಹಾಗೂ ಬಿಜೆಪಿ ಪಕ್ಷದ 4 ಶಾಸಕ ಆಕಾಂಕ್ಷಿ ಅಭ್ಯರ್ಥಿಗಳು ಹಣದ ಹೊಳೆ ಸುರಿಸಿದರು ಅವರು ಜಯ ಕಾಣಲು ಆಗಲಿಲ್ಲ ಎಂದರು ಹಾಗೂ ಗ್ರಾಮದ ಮತದಾರರಿಗೆ ಧನ್ಯವಾದ ಹೇಳಿದರು.ನಂತರ ಮಾತನಾಡಿದ ಮಾಜಿ ತಾಲೂಕು ಪಂಚಾಯತಿ ಸದಸ್ಯ ಜವಾದ್ ಅಹ್ಮದರವರು ಇಲ್ಲಿ ಹಣಬಲ ನಡೆಯಲ್ಲ ಬಿಜೆಪಿ ಪಕ್ಷದ ಬೇರೆ ಬೇರೆ ಪ್ರದೇಶದಿಂದ ಬಂದು ಹಣದ ಹೊಳೆ ಸುರಿಸಿದರು ಪ್ರಯೋಜನಕ್ಕೆ ಬಂದಿಲ್ಲ ಹನೂರು ಕ್ಷೇತ್ರದಲ್ಲೀ ಹಣ ಬಲ ನಡೆಯಲ್ಲ ಜನ ಬಲ ಎಂದು ಈ ಫಲಿತಾಂಶದಿಂದ ನಮಗೆ ತಿಳುವುದು ಏನಂದರೆ ಹನೂರು ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ ಎಂದರು.ಈ ಸಂದರ್ಭದಲ್ಲಿ ಜವಾದ್ ಅಹಮ್ಮದ್.ಚಾಮುಲ್ ನಿರ್ದೇಶಕ ತಾರಿಕ್ ಅಹಮ್ಮದ್ ಬಂಡಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button