ಮಹಿಷನ ನಾಡಲ್ಲಿ ಪ್ರಥಮ ಮಹಾ ಬೌದ್ಧ ಸಮ್ಮೇಳನ
ಮೈಸೂರು :- ಬೌದ್ಧ ಮಹಾ ಸಮ್ಮೇಳನ ಪೂಜ್ಯ ಬಿಕ್ಕು ಮತ್ತು ಬಿಕ್ಕುಣಿಯರ ಸಂಘಗಳ ಸಾನಿಧ್ಯದಲ್ಲಿ ಬೋಧಿಸತ್ವ ಬಾಬಾಸಾಹೇಬ್ ಡಾ.ಬಿ .ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪರಮ ಪೂಜ್ಯ, ವಿಶ್ವರತ್ನ, ಬೋಧಿಸತ್ವ ಬಾಬಾ ಸಾಹೇಬ್ ಡಾ.ಬಿ. ಆರ್ , ಅಂಬೇಡ್ಕರ್ ರವರ ಮೊಮ್ಮಗ ಮಹಾ ಉಪಾಸಕರಾದ ಡಾ. ಭೀಮರಾವ್ ಯಶವಂತರಾವ್ ಅಂಬೇಡ್ಕರ್ ರವರು ಪಾಲ್ಗೊಂಡು ಬೆಳಗ್ಗೆ 9:30 ಕ್ಕೆ ದಮ್ಮ ನಡಿಗೆಯ ಮೂಲಕ ಪುರಭವನದಿಂದ ಲಲಿತ ಮಹಲ್ ಅರಮನೆ ಮೈದಾನದವರೆಗೆ ಪೂಜ್ಯ ಬಿಕ್ಕು ಸಂಘದ ನೇತೃತ್ವದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯದ ಸಮತಾ ಸೈನಿಕ ದಳದವರಿಂದ ಪಥ ಸಂಚಲನದ ಮೂಲಕ ಆಗಮಿಸಿದರು ನಂತರ ವೇದಿಕೆಯಲ್ಲಿ ಬುದ್ಧ ವಂದನಾ-ತಿಸರಣ ಪಂಚಶೀಲಪೂಜ್ಯ ಬಿಕ್ಕು ಮತ್ತು ಬಿಕ್ಕುಣಿ ಸಂಘದ ಸಾನಿಧ್ಯದಲ್ಲಿಮೈತ್ರಿ ಧ್ಯಾನದ ಮೂಲಕ ಪ್ರಾರಂಭಿಸಿದರು ಭಾರತೀಯ ಬೌದ್ಧ ಸಭಾ ಹಾಗೂ ವಿವಿಧ ದಲಿತ ಸಂಘಟನೆಗಳ ಜೊತೆ ಗುಡಿ ಕಾರ್ಯಕ್ರಮವನ್ನು ಡಾ ಭೀಮರಾವ್ ಯಶವಂತ್ ರಾವ್ ಅಂಬೇಡ್ಕರ್ ರವರು ಉದ್ಘಾಟಿಸಿದರುನಂತರ ಈ ಮಹಾ ಬೌದ್ಧ ಸಮೇಳನ ಉದ್ದೇಸಿಸಿ ಮಾತನಾಡಿದ ಜ್ನ್ಯಾನ ಪ್ರಕಾಶ್ ಸ್ವಾಮೀಜಿಗಳು ಇಲ್ಲಿ ಬಂದಿರುವ ರಾಜ್ಯದ ಮೂಲೆ ಮೂಲೆಯ ಅಂಬೇಡ್ಕರ್ ಮೊಮ್ಮಕ್ಕಳು ನೀವೆಲ್ಲ ನಿಮಗಾಗಿ ಇವತ್ತಿನ ವೇದಿಕೆ ಸಿದ್ದಪಡಿಸಿದ್ದೇವೆ.ನಾವೇಕೆ ಬೌದ್ಧರಾಗಬೇಕು ಎನ್ನುವುದಾದರೆ ನಮ್ಮ ತಾತ ಮುತ್ತತಂದಿರು ಹಿಂದೆ ಬೌದ್ಧರಾಗಿದ್ದರು ಹಾಗಾಗಿ ನಾವುಗಳು ಬೌದ್ಧರಾಗ್ತಾ ಇದೀವಿ ಎಂದರು ಇದು ಮತಾಂತರವಲ್ಲ ಮರಳಿ ಮನೆಗೆ ಬುದ್ಧ ದಮ್ಮದ ಕಡೆಗೆ ನಾವೆಲ್ಲ ಸಾಗಬೇಕಿದೆ ನಮಗೆ ಕೈಗೂ ಅಥವಾ ಕಾಲಿಗೂ ಬೇಡಿ ಹಾಕಿದ್ರೆ ಬಿಡಿಸಿಕೊಳ್ಳಬಹುದಿತ್ತು ಆದರೆ ಈ ಮಧ್ಯ ಏಶ್ಯ ದಿಂದ ಬ್ರಾಹ್ಮಣರು ದೇವರು ಅನ್ನುವ ಮಹಾ ದೊಡ್ಡ ಸುಳ್ಳನ್ನು ನಮ್ಮಗಳ ಮೆದುಳಿಗೆ ವಾಶ್ ಮಾಡಿ ಬೇಡಿ ಹಾಕ್ಬಿಟ್ಟಿದಾರೆ ಆ ಮೆದುಳಿಂದ ಬೇಡಿಯನ್ನು ಬಿಡಿಸಿಕೊಳ್ಳಲು ಮೈಸೂರಿನಲ್ಲಿ ಪ್ರಥಮ ಬೌದ್ಧ ಸಮ್ಮೇಳನವನ್ನು ಆಯೋಜಿಸಲಾಗಿದೆ ಹಾಗಾಗಿ ನಾವುಗಳು ಹಿಂದು ಧರ್ಮವನ್ನು ತ್ಯಜಿಸಿ ನಮ್ಮ ಸ್ವಂತ ಮನೆ ಬೌದ್ಧ ದಮ್ಮದ ಮನೆಗೆ ಮರಳಿ ಹೋಗಬೇಕಿದೆ. 1911 ರಲ್ಲಿ ಬ್ರಿಟಿಷರು ಗೆಜೆಟ್ ನಲ್ಲಿ ಪ್ರಕಟ ಮಾಡಿದ್ದಾರೆ ಹಿಂದುಗಳಾಗುವ ಯಾವ ಲಕ್ಷಣವು ನಮ್ಮಲ್ಲಿಲ್ಲ ಅಸ್ಪೃಶ್ಯರು ಹಿಂದೂಗಳಲ್ಲ.ಎಂದು ಯಾರು ವೇದ ಉಪನಿಷತ್ತುಗಳನ್ನು ಬ್ರಾಹ್ಮಣತ್ವವನ್ನು ಒಪ್ಪುವುದಿಲ್ಲ ಅವರು ಹಿಂದೂಗಳಲ್ಲ ದನದ ಮಾಂಸವನ್ನು ತಿನ್ನುವವರು ಹಿಂದುಗಳಲ್ಲ ಮಂತ್ರ್ಯೋಪಚಾರಗಳನ್ನು ಯಾರು ಹೇಳುವುದಿಲ್ಲ ಅವರು ಹಿಂದೂಗಳಲ್ಲ ಸುಮಾರು ಹತ್ತು ಪಾಯಿಂಟ್ ಗಳನ್ನು ಇಟ್ಟಿಕೊಂಡು ಬ್ರಿಟಿಷರು.ಅಸ್ಪೃಶ್ಯರು ಹಿಂದೂಗಳಲ್ಲ ಎಂದು ಘೋಷಣೆ ಮಾಡಿದ್ದಾರೆ ನಮ್ಮಲ್ಲಿ ಹಿಂದುಗಳಾಗುವ ಯಾವ ಲಕ್ಷಣವೂ ನಮ್ಮಲ್ಲಿ ಇಲ್ಲ.. ನಾವು ಯಾವುದೇ ಊರಿಗೆ ಹೋದರು ಅಲ್ಲಿ ಅರಳಿ ಮರಗಳು ಇರುತ್ತವೆ ಅರಳಿ ಮರ ಇಲ್ಲದ ಊರೇ ಇಲ್ಲ ಅರಳಿಮರ ಅಂದರೆ ಜ್ಞಾನ ಅರಳಿದ ಮರ ಬುದ್ಧರಿಗೆ ಜ್ಞಾನೋದಯ ಆದ ಮರ ನಾವು ಮೂಲತಃ ಬೌದ್ಧರು ಎನ್ನುವುದಕ್ಕೆ ಇದೇ ಸಾಕ್ಷಿ ನಾವೆಲ್ಲರೂ ಕೂಡ ಹಂಚಿ ತಿಂದಿದ್ದೇವೆ ಹೊರತು ವಂಚಿಸಿ ತಿಂದಿಲ್ಲ ಎಂಬುವುದನ್ನು ಸಾಬೀತು ಮಾಡಿದ್ದೇವೆ ಯಾರಿಗೂ ವಂಚನೆ.ಮೋಸ. ವ್ಯಾಬಿಚಾರ.ದರೋಡೆ ಮಾಡದ ಜನರು ನಾವುಗಳು ಮತ್ತು ನಮ್ಮ ಪೂರ್ವಿಕರು. ಹಾಗೆಯೇ ನಮಗೆ ಆಯುಧಗಳನ್ನ ಏಕೆ ನಿಷೇಧ ಮಾಡಿಲಾಯಿತು. ವಿದ್ಯೆ ವ್ಯಾಪಾರವನ್ನು ನಿಷೇದ ಯಾಕ್ ಮಾಡುದ್ರು ಅಂದ್ರೆ. ನಾವು ಮೂಲತಃ ಬೌದ್ಧರಾಗಿ ಪ್ರಕೃತಿಯನ್ನು ಪಾಲನೆ ಮಾಡ್ತಿದ್ವಿ ಅದನ್ನು ಕ್ಷಣ ಕ್ಷಣಕ್ಕೂ ಬೌದ್ಧ ಧರ್ಮವನ್ನು ನಾಶ ಮಾಡುವುದಕ್ಕೆ ಪ್ರಯತ್ನಪಟ್ರು ಆದರೆ ಪ್ರಕೃತಿಯ ಮುಂದೆ ಸತ್ಯದ ಮುಂದೆ ಇತಿಹಾಸದ ಮುಂದೆ ಸುಳ್ಳಿಗೆ ಜಾಗ ಇಲ್ಲ ಅನ್ನೋದಕ್ಕೆ ನಮ್ಮ ಮೈಸೂರು ಸಾಕ್ಷಿಯಾಗಿದೆ. ಬೌದ್ಧ ಧರ್ಮವನ್ನು ಇಲ್ಲಿ ಪ್ರಾರಂಭ ಮಾಡುವುದರ ಮುಖಂತರವಾಗಿ ಬೌದ್ಧದಮ್ಮ ಸತ್ಯ.ಸಮಾನತೆ. ಸೋದರತೆ.ಬಾತೃತ್ವದಿಂದ ಕುಡಿರುವ ಧರ್ಮ ಬೌದ್ಧ ದಮ್ಮ ಮನುಷ್ಯ ಮನುಷ್ಯರನ್ನು ಗೌರವಿಸುವ ಧರ್ಮ ಬೌದ್ಧ ಧಮ್ಮ ವಿಚಾರ ಮಾಡುವ ದಮ್ಮ ಬೌದ್ಧ ದಮ್ಮ. ಬಾಬಾ ಸಾಹೇಬ್ರು ಬೌದ್ಧ ಧಮ್ಮವನ್ನು ಯಾಕೆ ಒಪ್ಕೊಂಡ್ರು ಅಂದರೆ ಬುದ್ಧರ ಕೈಯಲ್ಲಿ ಆಯುಧಗಳಿಲ್ಲ ಶಾಂತಿ ಇದೆ ನೆಮ್ಮದಿ ಇದೆ ಆದರ್ಶವಿದೆ ಮೈತ್ರಿ ಇದೆ ಆಗಾಗಿ ಬಾಬಾಸಾಹೇಬರು ಬುದ್ಧ ರ ಅಹಿಂಸಾ ಮಾರ್ಗವೇ ಜಗತ್ತಿಗೆ ಒಳ್ಳೇದು ಎಂದು ಬೌದ್ಧರಾದರೂ ಬೇರೆ ಬೇರೆ ದೇವರುಗಳ ಕೈಯಲ್ಲಿ ಬಿಲ್ಲು ಬಾಣ ಈಟಿ ಮಚ್ಚು ಕೊಡಲಿ ಯುದ್ಧದ ಸಾಮಗ್ರಿಗಳಿವೆ.. ಆದರೆ ಬುದ್ಧರಲ್ಲಿ ಆಯುಧಗಳಿಲ್ಲ. ಆದರ್ಶಗಳಿವೆ .ಮೈತ್ರಿ ಕರುಣೆ. ಪ್ರೀತಿ.ಮಾನವೀಯತೆ ಇದೆ ಸಮಾನತೆ ಇದೆ. ಸ್ವಾಮಿ ವಿವೇಕಾನಂದರು ಭಾರತವು ಬೌದ್ಧರಾಷ್ಟ್ರ ಎಂದು ಚಿಕಗೋದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಹೇಳಿದ್ದಾರೆ.ಬುದ್ದರು ನನ್ನ ತಾಯಿ ಅಂತ ಹೇಳ್ತಾರೆ ವಿವೇಕಾನಂದರು ಅಂತಹ ಬುದ್ಧ ದಮ್ಮವನ್ನ ಬಾಬಾ ಸಾಹೇಬರು ನಮಗೆ ಕೊಟ್ಟು ಹೋಗಿದ್ದಾರೆ ಅಂತಹ ಶ್ರೇಷ್ಠ ಧರ್ಮವನ್ನು ನಾವೆಲ್ಲರೂ ಕೂಡ ಕಾಪಾಡಿಕೊಳ್ಳಬೇಕಾಗಿದೆ ಎಂದರು ಇನ್ನು ಇದೆ ವೇಳೆ ಸಮಾಜಕ್ಕೆ ಅತಿ ಮುಖ್ಯವಾಗಿ ತುಂಬಾ ಬೇಕಿರುವ ಉಪಯೋಗಕಾರಿಯಾಗಿರುವ ಸಮಾನತೆಯಿಂದ ಕೂಡಿರುವ ಬೌದ್ಧರ ಹತ್ತು ನಿರ್ಣಯಗಳನ್ನು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು ಬೌದ್ಧ ನಿರ್ಣಯಗಳು1) ಬುದ್ಧ ಪೂರ್ಣಿಮೆಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವುದು. 2) ಬೌದ್ಧ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ,3) ಕರ್ನಾಟಕದಾದ್ಯಂತ ಬೌದ್ಧ ವಿಹಾರಗಳ ನಿರ್ಮಾಣ ಮತ್ತು ನಿರ್ವಹಣೆ. 4) ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆ ಕೇಂದ್ರಗಳಲ್ಲಿ 25 ಎಕರೆ, ತಾಲ್ಲೂಕು ಕೇಂದ್ರಗಳಲ್ಲಿ 5ಎಕರೆ, ಹಳ್ಳಿಗಳಿಗೆ ಒಂದು ಎಕರೆ, ಸರಕಾರಿ ಜಮೀನನ್ನು ಬುದ್ಧವಿಹಾರ, ಧ್ಯಾನಕೇಂದ್ರ, ಶಾಲಾ ಕಾಲೇಜುಗಳಿಗೆ ಮಂಜೂರು ಮಾಡುವುದು.5) ಬೌದ್ಧರು ನಡೆಸುವ ಶಾಲಾ-ಕಾಲೇಜುಗಳು ಅನಾಥಾಶ್ರಮಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲು ಮನವಿ.6) ಬೌದ್ಧ ಸಾಹಿತ್ಯದ ತ್ರಿಪೀಠಕಗಳು ಮತ್ತು ಅದಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಾಶನ ಮಾಡಲು ಅನುದಾನವನ್ನು ಬಿಡುಗಡೆ.1) ಬೌದ್ಧ ಯಾತ್ರಾ ಸ್ಥಳಗಳಿಗೆ ಪ್ರವಾಸ ಮಾಡಲು ಅನುದಾನವನ್ನು ನೀಡಬೇಕು. 8) ಬೌದ್ಧರಾದವರಿಗೆ ಧರ್ಮ ಪ್ರಮಾಣ ಪತ್ರವನ್ನು ನೀಡುವುದು.9) ಬೌದ್ಧ ವಿದ್ಯಾರ್ಥಿಗಳಿಗೆ ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡುವುದು,10)ಸಾಮ್ರಾಟ ಅಶೋಕರು ನಿರ್ಮಿಸಿದಂತಹ ಶಿಲಾಶಾಸನಗಳನ್ನು ರಕ್ಷಿಸಿ ಅಭಿವೃದ್ಧಿಗೊಳಿಸುವುದು. ಈ ಐತಿಹಾಸಿಕ ಬೌದ್ಧ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಬುದ್ಧರ ಅನುಯಾಯಿಗಳು ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಜಿಲ್ಲೆಗಳಿದ್ದ ಬಂತೆಜಿಗಳು. ದಲಿತ ಸಂಘಟನೆಗಳು.ಮಹಿಳಾ ಸಂಘದವರು. ಬಹುಜನ ಚಿಂತಕರು ಹಾಗೂ ಮೈಸೂರಿನ ಮಾಜಿ ಮೇಯಾರ್ ಆದಂತಹ ಪುರುಷೋತ್ತಮ್ ಹಾಗೂ ಜ್ನ್ಯಾನ ಪ್ರಕಾಶ್ ಸ್ವಾಮೀಜಿಯವರ ನೇತೃತ್ವದಲ್ಲಿ ತುಂಬಾ ಯಶಸ್ವಿಯಾಗಿ ನಡೆಯಿತು