ಪಿವಿ ವಿಶೇಷ

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಆರ್ ನರೇಂದ್ರ

ಶಾರುಕ್ ಖಾನ್ ಹನೂರು

ಹನೂರು:ತಾಲೂಕಿನ ಶೆಟ್ಟಳ್ಳಿ ಗ್ರಾಮದಿಂದ ಕುರಟ್ಟಿ ಹೊಸೂರು ಗ್ರಾಮಕ್ಕೆ ಸಂಬಂಧ ಕಲ್ಪಿಸುವ ರಸ್ತೆಗೆ ಶಾಸಕರಾದ ಆರ್ ನರೇಂದ್ರ ರವರು ಇಂದು ಭೂಮಿ ಪೂಜೆ ನೆರವೇರಿಸಿದರು ಶಾಸಕರಾದ ಆರ್ ನರೇಂದ್ರ ಅವರು ಮಾತನಾಡಿ ವಿಶೇಷ ಅನುದಾನದಡಿಯೇ ಈ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಸುಮಾರು ಒಂದುವರೆ ಕಿಲೋಮೀಟರ್ ರಸ್ತೆಗೆ ಒಂದುವರೆ ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ಮಾಡಿದ್ದು ಉತ್ತಮ ರೀತಿಯಲ್ಲಿ ರಸ್ತೆ ಇರಬೇಕೆಂದು ತಿಳಿಸಿದರು. ಸರ್ಕಾರದಿಂದ ವಿಶೇಷ ಅನುದಾನ 25 ಕೋಟಿ ಬಂದಿದ್ದು ಅದರಲ್ಲಿ ಆರ್ ಡಿ ಪಿ ಆರ್ ಗೆ 10 ಕೋಟಿ, ಉಳಿದ 15 ಕೋಟಿಯನ್ನು ಪಿಡಬ್ಲ್ಯೂಡಿ ರಸ್ತೆಗಳಿಗೆ ಹಣವನ್ನು ವಿನಿಯೋಗಿಸಿದ್ದು, ಮಾಟಳ್ಳಿ ಗ್ರಾಮದಲ್ಲಿ ನಾಲ್ಕುವರೆ ಕಿಲೋಮೀಟರ್ ರಸ್ತೆಗೆ ನಾಲ್ಕುವರೆ ಕೋಟಿ ಹಣ, ಹಾಗೂ ಬಂಡಳ್ಳಿಯಿಂದ ತೆಳ್ಳನೂರು ರಸ್ತೆಗೆ ಏಳುವರೆ ಕೋಟಿ ಹಣವನ್ನು ನೀಡಲಾಗಿದೆ ಇನ್ನು 3-4 ದಿನಗಳಲ್ಲಿ ಇದರ ಪ್ರಕ್ರಿಯೆ ಮುಗಿದು ಇದರ ಗುದ್ದಲಿ ಪೂಜೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಕಳೆದ ಮೂರು ನಾಲ್ಕು ವರ್ಷಗಳಿಂದ ಪಿಡಬ್ಲ್ಯೂಡಿ ಇಲಾಖೆಯಿಂದ ಯಾವುದೇ ಅನುದಾನ ನೀಡಿಲ್ಲ ನಮ್ಮ ಕ್ಷೇತ್ರ ಅತ್ಯಂತ ದೊಡ್ಡ ಕ್ಷೇತ್ರ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಎಂಟು ಕ್ಷೇತ್ರ ದಷ್ಟು ಉದ್ದವಿದೆ. ಇಡೀ ಕ್ಷೇತ್ರಕ್ಕೆ ಕುಡಿಯಲು ಕಾವೇರಿ ನೀರಿನ ವ್ಯವಸ್ಥೆಯನ್ನು ಮಾಡಿದ್ದೇನೆ, ಹಾಗೂ ಸರ್ಕಾರವು ನಮ್ಮ ಕ್ಷೇತ್ರಕ್ಕೆ ಅನುದಾನವನ್ನು ನೀಡುತ್ತಿಲ್ಲ ಎಂದು ತಿಳಿಸಿದರು. ನಾನು ಮೂರು ಬಾರಿ ಶಾಸಕರಾಗಿದ್ದು ಸುಮಾರು 25ರ ವರ್ಷಗಳಿಂದನು ರಾಜಕೀಯವನ್ನು ಬಲ್ಲೆ, ಆದರೆ ಯಾವುದೇ ಸರ್ಕಾರವು ತಾರು ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿರುವುದು ನನ್ನ ಜೀವನದಲ್ಲಿ ನೋಡಿಲ್ಲ, ಇಂತಹ ಸರ್ಕಾರವನ್ನು ನಾವು ನೋಡಿಯೇ ಇಲ್ಲ ಎಂದು ಸರ್ಕಾರದ ವಿರುದ್ಧ ವಾಕ್ ಸಮರವನ್ನು ಮಾಡಿದರು.

Related Articles

Leave a Reply

Your email address will not be published. Required fields are marked *

Back to top button