ಪಿವಿ ವಿಶೇಷ
ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗುಲಿ ಕಬ್ಬು ಬೆಳೆ ನಾಶ.
ಶಾರುಕ್ ಖಾನ್ ಹನೂರು
ಹನೂರು: ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗುಲಿ ಕಬ್ಬಿನ ಗದ್ದೆ ನಾಶವಾಗಿರುವ ಘಟನೆ ತಾಲ್ಲೂಕಿನ ಸಮೀಪದ ಎಲ್ಲೇಮಾಳ ರಸ್ತೆಯಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್ ಕುಮಾರ್ ರವರ ಜಮಿನಿನಲ್ಲಿ ಬೆಳೆದ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಅಪಾರ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ, ಆನಂದ್ ಕುಮಾರ್ ರವರಿಗೆ ಸೆರಿದ ಸರ್ವೆ ನಂ311/B1 4.70 ಎಕರೆ 481/A1 3.00 ಎಕರೆ ರಷ್ಟು ಬೆಳೆದ ಕಬ್ಬಿನ ಬೆಳೆಯಿಂದ ಸಾಕಷ್ಟು ನಷ್ಟವಾಗಿದೆ ಇದರಿಂದ ಇವರಿಗೆ ಸುಮಾರು ಐದು ಎಕರೆಯಷ್ಟು ನಷ್ಟ ಅನುವಭವಿಸಿದೆ .ಎಂದು ಗ್ರಾಮಸ್ಥರು ತಿಳಿಸಿದರು ಈ ಘಟನೆಯಿಂದ ಅವರಿಗೆ ಅಪಾರ ನಷ್ಟ ಉಂಟಾಗಿದೆ.