ಕ್ರೈಂ ನ್ಯೂಸ್

ಕೊಲೆ ಪ್ರಕರಣದಲ್ಲಿ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕನ ಪುತ್ರ ಅರೆಸ್ಟ್

ಕೊಲೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕನ ಪುತ್ರನನ್ನು ಅರೆಸ್ಟ್ ಮಾಡಲಾಗಿದೆ.

ಮಂಡ್ಯ: ಕೊಲೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕನ ಪುತ್ರನನ್ನು ಅರೆಸ್ಟ್ ಮಾಡಲಾಗಿದೆ. ರೈಲ್ ಫುಲ್ಲಿಂಗ್ ವಿಚಾರವಾಗಿ ಫೆಬ್ರವರಿ 7ರಂದು ಕೊಳ್ಳೇಗಾಲದ ಸಲೀಂ ಎಂಬಾತನ ಹತ್ಯೆಯಾಗಿತ್ತು. ರೈಲ್ ಫುಲ್ಲಿಂಗ್ ವಿಚಾರವಾಗಿ ಕೊಳ್ಳೇಗಾಲದ ಸಲೀಂ ಎಂಬಾತನನ್ನು ಮೈಸೂರಿನಲ್ಲಿ ಗುಂಪೊಂದು ಕೊಂದು ಮಳವಳ್ಳಿಯ ಪಡಂತಹಳ್ಳಿಯ ರಸ್ತೆ ಬದಿ ಬಿಸಾಡಿತ್ತು. ಪ್ರಕರಣದಿಂದ ಪಾರಾಗಲು ಪೊಲೀಸ್ ಸರ್ಕಲ್​ ಇನ್ಸ್​​ಪೆಕ್ಟರ್​​ (ಸಿಪಿಐ) ಒಬ್ಬರ ನೆರವಿನಿಂದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿತ್ತು. ಸದರಿ ಸಿಪಿಐ 10 ಲಕ್ಷ ರೂಪಾಯಿ ಹಣ, ಹೊಸ ಕಾರಿನ ಆಸೆಗೆ ಸಹಾಯಕ್ಕೆ ಒಪ್ಪಿದ್ದರು.

ಮಾಜಿ ಶಾಸಕ ಪುತ್ರನ ಪಾತ್ರ ಎಲ್ಲಿ, ಹೇಗೆ?:
ರಸ್ತೆ ಬದಿಯಲ್ಲಿ ಶವ ಹಾಕಿ, ಮೂವರನ್ನ ಪ್ರಕರಣ ಒಪ್ಪಿಕೊಳ್ಳವಂತೆ ರೆಡಿ ಮಾಡಲು ಸೂಚನೆ ರವಾನೆಯಾಗಿತ್ತು. ಅದರಂತೆ ಮಾಜಿ ಶಾಸಕನ ಪುತ್ರ ಹಣದಾಸೆ ತೋರಿಸಿ ತನ್ನ ಸಹಚರರಿಗೆ ಸುಪಾರಿ ನೀಡಿದ್ದ. ಆದರೆ ಮೃತದೇಹ ಹಾಕುವಾಗ ಮಾಡಿದ ಯಡವಟ್ಟಿನಿಂದ ಪ್ರಕರಣ ಬಯಲಾಗಿದೆ!

ಬೆಳಕವಾಡಿ ಠಾಣೆಯ ವ್ಯಾಪ್ತಿ ಬದಲಿಗೆ ಮಳವಳ್ಳಿ ಗ್ರಾಮಾಂತರ ಲಿಮಿಟ್ ಗೆ ಶವ ಹಾಕಿದ ಆ ಮೂವರೂ ಠಾಣೆಗೆ ಬಂದು ಶರಣಾಗಿದ್ದರು. 100 ಮೀಟರ್ ವ್ಯತ್ಯಾಸದಿಂದ ಸಿಪಿಐ ಮಾಸ್ಟರ್ ಪ್ಲಾನ್ ಉಲ್ಟಾ ಹೊಡೆದಿದೆ. ಮಳವಳ್ಳಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಹಾಗೂ ತಂಡ ಕೈಗೆತ್ತಿಕೊಂಡಿದ್ದ ಸೂಕ್ಷ್ಮ ತನಿಖೆಯಿಂದ ಪ್ರಕರಣ ಬಟಾಬಯಲಾಗಿದೆ.

ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಆಸ್ಪತ್ರೆಯಲ್ಲಿ ಸಾವು
ಮಂಗಳೂರು: ಟೂಥ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ (rat poison) ಹಲ್ಲುಜ್ಜಿದ ಯುವತಿ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಶ್ರಾವ್ಯ ಮೃತ ಯುವತಿ. ಮನೆಯ ಬಾತ್ ರೂಂ ನ ಕಿಟಕಿ ಬಳಿ ಯಾವಾಗಲೂ ಟೂಥ್ ಪೇಸ್ಟ್ ಇಡುತ್ತಿದ್ದರು. ಆದರೆ ಆ ಟೂಥ್ ಪೇಸ್ಟ್ ಪಕ್ಕದಲ್ಲೇ ಇಲಿ ಪಾಷಾಣದ ಪೇಸ್ಟ್ ಇತ್ತು. ಕತ್ತಲಿದ್ದಿದ್ದರಿಂದ ತಿಳಿಯದೆ ಇಲಿ ಪಾಷಾಣವನ್ನೇ ಯುವತಿ ಕೈಗೆತ್ತಿಕೊಂಡಿದ್ದಳು. ಹಲ್ಲುಜ್ಜುವಾಗ ಇಲಿ ಪಾಷಾಣ ಎಂದು ತಡವಾಗಿ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಿ ಅನಾಹುತ ಘಟಿಸಿತ್ತು. ತೀವ್ರ ಅಸ್ವಸ್ಥಗೊಂಡ ಶಾವ್ಯಳನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶ್ರಾವ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ರಸ್ತೆ ದಾಟುವಾಗ ಬೈಕಿಗೆ ಬಸ್ ಡಿಕ್ಕಿ; ಚಿಕ್ಕಬಳ್ಳಾಪುರದ ಹೊನ್ನೇನಹಳ್ಳಿ ಗೇಟ್ ಬಳಿ ಬೆಂಗಳೂರು ಮೂಲದ ಮೂವರ ಸಾವು
ಚಿಕ್ಕಬಳ್ಳಾಪುರ: ರಸ್ತೆ ಕ್ರಾಸ್ ಮಾಡುವಾಗ ಬೈಕ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಮಹಿಳೆ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ. ಬೆಂಗಳೂರು ಮೂಲದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button