ದಿವಂಗತ ಹೆಚ್ ನಾಗಪ್ಪ ಪುಣ್ಯಸ್ಮರಣೆಗೆ ಸುತ್ತುರು ಶ್ರೀ ಗಳಿಗೆ ಆಹ್ವಾನ.
ಹನೂರು :ವಿಧಾನ ಸಭಾಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡಿದ ದಿವಂಗತ ಹೆಚ್ ನಾಗಪ್ಪ ರವರ 20 ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಶ್ರೀ ಶ್ರೀ ಸುತ್ತುರು ಶ್ರೀಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು ಎಂದು ಹನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಾಕ್ಟರ್ ಪ್ರೀತನ್ ನಾಗಪ್ಪ ತಿಳಿಸಿದರು.ಕಾರ್ಯಕ್ರಮ ಹನೂರಿನ ಗೌರಿಶಂಕರ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಸುತ್ತೂರು ಶ್ರೀ ಮಠಕ್ಕೆ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಯವರನ್ನು ನಮ್ಮ ತಂದೆಯವರ 20 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಯಶಸ್ವಿ ಮಾಡಿ ಕೊಡ ಬೇಕೆಂದು ಮನವಿ ಮಾಡಿದ್ದಿನಿ ಎಂದರು.ಇದೇ ಸಮಯದಲ್ಲಿ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶ ಕೇಂದ್ರ ಮಹಾ ಸ್ವಾಮಿಗಳು ಮಾತನಾಡಿ ದಿವಂಗತ ಹೆಚ್. ನಾಗಪ್ಪ ರವರು ತಮ್ಮ ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು.ಹಾಗೂ ಕ್ಷೇತ್ರದ ಜನರ ಕಷ್ಟ ಸುಖ ದುಃಖ ಗಳಿಗೆ ಭಾಗಿಯಾಗುತ್ತಿದರು ಅವರನ್ನು ನಾವು ಕಳೆದು ಕೊಂಡು ಇಂದಿಗೆ 20 ವರ್ಷಗಳಕಾಲ ಕಳೆದರು ನಮಗೆ ಹಾಗೂ ನಮ್ಮ ಕ್ಷೆತ್ರದ ನಾಗಪ್ಪ ಅಭಿಮಾನಿ ಬಳಗ ದವರಿಗೆ ಇನ್ನೂ ಅವರ ನೆನಪುಗಳು ಅಚ್ಚೆಹಾಕಿದಾಗೆ ಉಳಿದಿದೆ ಮತ್ತು ನಿಮ್ಮ ಕುಟುಂಬದ ಜೊತೆ ಸದಾ ಕ್ಷೇತ್ರದ ಜನರು ಹಾಗೂ ನಮ್ಮ ಮಠ ಇದ್ದೇವೆ ಎಂದು ಶ್ರೀ ಗಳು ಧೈರ್ಯ ತುಂಬಿದರು. ಕ್ಷೇತ್ರಾದ್ಯಂತ ಎಲ್ಲಾ ಸಮುದಾಯದವರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಜನರಿಗೆ ಆದಷ್ಟೂ ಸಹಾಯ ಮಾಡಿ ಎಂದು ಸಲಹೆ ನೀಡಿದರು.