ರೈತ-ದೇಶದ ಸೈನಿಕರು ಪಕ್ಷೇತರ ಅಭ್ಯರ್ಥಿ ಮುಜಾಮಿಲ್ ಪಾಷ
ವರದಿ ಶಾರೂಕ್ ಖಾನ್ ಹನೂರು
ಹನೂರು :ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಒಬ್ಬರಿಲ್ಲದೆ ಒಬ್ಬರು ಬದುಕಲು ಸಾಧ್ಯವಿಲ್ಲ ಇವರಿಬ್ಬರಿಂದಲೇ ಜಗತ್ತು ಸುಂದರ ಮತ್ತು ನೆಮ್ಮದಿ ಕಾಣಲು ಸಾಧ್ಯ.. ದೇಶದಲ್ಲೇ ರೈತನಂತ ನೆಮ್ಮದಿಯಾದ ಬುದ್ದಿವಂತ ಮತ್ತೊಬ್ಬನಿಲ್ಲ, ಪ್ರಸಕ್ತ ಸಾಲಿನಲ್ಲಿ ರೈತನು ಬೆಳೆಯುವ ಬೆಳೆಗೆ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ ಕಟಾವು-ಒಕ್ಕಣೆ ಅತಿವೃಷ್ಟಿ. ಎಲ್ಲವನ್ನು ಮೀರಿ ಕೈಗೆ ಬಂದ ಬೆಳೆಯನ್ನು ಪಡೆದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಳಗೆ ಉತ್ತಮ ಬೆಲೆ ಸಿಗದಿರುವುದು ರೈತನನ್ನು ಮುಖ್ಯವಾಗಿ ನಷ್ಟದ ಹಳ್ಳಕ್ಕೆ ದೂಡಿದೆ ದೇಶದಲ್ಲಿ ಎಷ್ಟೇ ರಾಜ ಮನೆತನ ಹುಟ್ಟಿ ಅಳಿದರು, ರಾಷ್ಟ್ರದಲ್ಲಿ ಎಷ್ಟೇ ಸರ್ಕಾರಗಳು ಬದಲಾದರೂ ರೈತನ ಕಷ್ಟ ಬದಲಾಗಲಿಲ್ಲ, ನೇಗಿಲಯೋಗಿಗೆ ಎಷ್ಟೇ ಸಬ್ಸಿಡಿಗಳು ಭಾಗ್ಯಗಳು ಬಂದರು ಸಂಕಷ್ಟ ತಪ್ಪಲಿಲ್ಲ. ಪಕ್ಷಾತೀತವಾಗಿ ಸರ್ಕಾರಗಳಲ್ಲಿ ಮನವಿ ಮಾಡುವದೊಂದೆ ನಾವು ರೈತ ಕುಲ ಬೆಳೆದ ಬೆಳೆಗೆ ಒಳ್ಳೆ ಬೆಲೆ ಕೊಡಿ. ರೈತ ಕುಲದಲ್ಲಿ ಹುಟ್ಟಿ ಕೃಷಿ ಕಾಯಕದಲ್ಲಿ ನಿರಂತರವಾಗಿ ದುಡಿಯುತ್ತಿರುವ ಗಂಡು ಮಕ್ಕಳಿಗೆ ಮದುವೆ ಮಾಡ್ತೀವಿ ಅಂದ್ರೆ ಹೆಣ್ಣು ಮಕ್ಕಳು ಸಿಕ್ತಾ ಇಲ್ಲ ಇದಕ್ಕೆ ನನ್ನ ಮನೆಯ ಹೊರತಾಗಿಲ್ಲ ಈ ಕಷ್ಟಗಳೆಲ್ಲ ದೇವರು ಪರಿಹರಿಸಲಿ ರೈತ ಕುಲ ನೆಮ್ಮದಿಯಾಗಿ ಬದುಕಲೆಂದು ಹನೂರು ಕ್ಷೇತ್ರದ ಪಕ್ಷೆತರ ಅಭ್ಯರ್ಥಿ ಮುಜಾಮಿಲ್ ಪಾಷ ತಿಳಿಸಿ. ಇದೇ ಸಂಧರ್ಭದಲ್ಲಿ ರಾಷ್ಟ್ರೀಯ ರೈತ ದಿನದ ಶುಭ ಸಂದರ್ಭದಲ್ಲಿ ನನ್ನ ಇಡೀ ರೈತ ಸಮುದಾಯಕ್ಕೆ ಹಾರೈಸುತ್ತೇನೆ ಎಂದರು.