ಬಿ ಜೆ ಪಿ ,ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜೆ ಡಿ ಎಸ್ ಸೇರ್ಪಡೆ
ವರದಿ ಶಾರೂಕ್ ಖಾನ್ ಹನೂರು
ಹನೂರು :ತಾಲೂಕು ವ್ಯಾಪ್ತಿಯ ಬೋರೆದೊಡ್ಡಿ ಗ್ರಾಮಸ್ಥರು ಸಾಮೂಹಿಕವಾಗಿ ಜಾದಳ ಪಕ್ಷ ಸೇರ್ಪಡೆಯಾಗುತ್ತಿರುವುದು ಸಂತಸದ ವಿಚಾರ ಎಂದು ಜಾದಳ ಅಭ್ಯರ್ಥಿ ಎಂ ಆರ್ ಮಂಜುನಾಥ್ ತಿಳಿಸಿದರು. ನಂತರ ಮಾತನಾಡಿದ ಅವರು
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರು ಕೈಗೊಂಡಿದ್ದ. ಜನಪರ ಕಾರ್ಯಕ್ರಮಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿ ಹಾಗೂ ಪಕ್ಷ ಸಂಘಟನೆ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ಅವರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದೇನೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಸಮಸ್ಯೆಯನ್ನು ಹತ್ತಿರದಿಂದ ಕಂಡಿದ್ದೇನೆ ನಿಮ್ಮಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತೇನೆ.
ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರೆದೊಡ್ಡಿ, ಉದ್ದಟ್ಟಿ ಮಾವತ್ತೂರು ಗ್ರಾಮದ ನೂರಕ್ಕೂ ಹೆಚ್ಚು ಯುವಕರು ಹಾಗೂ ಮಹಿಳೆಯರು ಕಾಂಗ್ರೆಸ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹನೂರು ರಾಜಣ್ಣ ಗ್ರಾಪಂ ಅಧ್ಯಕ್ಷ ನಂಜಪ್ಪ, ಹಿರಿಯ ಮುಖಂಡರುಗಳಾದ ನಿಂಗ್ ಶೆಟ್ಟಿ, ನಾರಾಯಣ, ಮಹಾದೇವಸ್ವಾಮಿ, ಸಿದ್ದರಾಜು ಶೇಷಾದ್ರಿ ಸೋಮಣ್ಣ, ರುದ್ರಸ್ವಾಮಿ, ಶ್ರೀನಿವಾಸ್,ಜಡೇಸ್ವಾಮಿ,ನ್ಯಾಮತ್,ಸೇರಿದಂತೆ ಇನ್ನಿತರರು ಹಾಜರಿದ್ದರು.