ಪಿವಿ ವಿಶೇಷ
ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರ ಫ್ಲೆಕ್ಸ್ : ಕ್ರಮಕ್ಕೆ ಆರಗ ಒತ್ತಾಯ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರವಾದ ಫ್ಲೆಕ್ಸ್ ಹಾಕಲಾಗಿರುವ ಕುರಿತು ಬಿಜೆಪಿ ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಧಾರ್ಮಿಕ ಸೌಹಾರ್ದತೆಗೆ ಖ್ಯಾತಿಯಾಗಿರುವ ಸ್ಥಳ ಹಣಗೆರೆಕಟ್ಟೆಯಲ್ಲಿ ಮಂಗಳವಾರ ಪ್ಯಾಲೆಸ್ತೀನ್ ಪರವಾದ ಫ್ಲೆಕ್ಸ್ ಕಟ್ಟಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮುಜರಾಯಿ ಇಲಾಖೆ ಆಡಳಿತ ಜಾಗದಲ್ಲಿ ಫ್ಲೆಕ್ಸ್ ಹಾಕಿರುವ ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದು, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.