ಪಿವಿ ವಿಶೇಷ

ಚಿಕ್ಕಬಳ್ಳಾಪುರ: ನಾಲ್ಕು ಕೆಜಿ ಗಾಂಜಾ ವಶಪಡಿಸಿಕೊಂಡ ಪೊಲೀಸರು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡಲು ತಂದಿದ್ದ ವ್ಯಕ್ತಿಯನ್ನು ನಗರ ಠಾಣೆಯ ಪೊಲೀಸರು ಬಂಧಿಸಿ ಅವನಿಂದ ನಾಲ್ಕು ಕೆಜಿ ಗಾಂಜಾ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಬೂಬಜಾರ್ ನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ತಾಲೂಕಿನ ಕೈವಾರ ಹೋಬಳಿ ಮುತ್ತಕದಹಳ್ಳಿ ಗ್ರಾಮದ 59 ವರ್ಷದ ಶ್ರೀಧರಚಾರಿ ಬಿನ್ ಲೇಟ್ ಶ್ರೀನಿವಾಸಚಾರಿ ಎಂದು ಗುರುತಿಸಲಾಗಿದೆ.

ಡಿ ವೈ ಎಸ್ ಪಿ ಮುರಳಿಧರ್ ಪಿ,ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿಕುಮಾರ್,
ಹಾಗೂ ತಂಡ ನಗರದ ಬಂಬೂ ಬಜಾರ್ ನಲ್ಲಿ ಆಂಧ್ರ ಪ್ರದೇಶದಿಂದ ಮಾರಾಟ ಮಾಡಲು ತಂದಿದ್ದ ಸುಮಾರು ನಾಲ್ಕು ಕೆಜಿ ಗಾಂಜಾವನ್ನು ಆರೋಪಿ ಶ್ರೀಧರಚಾರಿಯಿಂದ ವಶಪಡಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇನ್ನು ಈ ಹಿಂದೆಯೂ ಸಹ ಆತ ಎರಡು ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ವರದಿ:ವೆಂಕಟಾಚಲಪತಿ, ಚಿಕ್ಕಬಳ್ಳಾಪುರ

Related Articles

Leave a Reply

Your email address will not be published. Required fields are marked *

Back to top button