ಸಿ ಎಸ್ ಆರ್ ಫಂಡ್ ಲೂಟಿ ಮಾಡಿದ ಮಂಗಳೂರು ಜಿಲ್ಲಾ ಆಯುಷ್ ಅಧಿಕಾರಿ
ಈ ಜಿಲ್ಲಾ ಆಯುಷ್ ಅಧಿಕಾರಿ ಒಂದು ದಿನವೂ ಆಯುರ್ವೇದ ವೃತ್ತಿ ಮಾಡದೇ ದಿನ ಕಳೆದ ವ್ಯಕ್ತಿ.ತನ್ನ ಕ್ಲಿನಿಕ್ ನಲ್ಲಿ ಅಲೋಪಥಿ ದಂಧೆ ಮಾಡಿದ ಈತ ಮಂಗಳೂರು ವೆನ್ ಲಾಕ್ ಆಯುಷ್ ಆಸ್ಪತ್ರೆ ತಾನೇ ಉದ್ದಾರ ಮಾಡಿದ್ದು ಅಂಥ ಎಲ್ಲಾ ಕಡೆ ಕಟ್ಟಡ ತೋರಿಸಿ, ಲ್ಯಾಬ್ ತೋರಿಸಿ, ಸೆಕೆಂಡ್ ಹ್ಯಾಂಡ್ ಉಪಕರಣ ತೋರಿಸಿ , ಸ್ಕೀಂ ಮಾಡಿ ಸಿ ಎಸ್ ಆರ್ ಫಂಡ್ ನುಂಗಿ ಹಾಕಿದ್ದು, ದಾಖಲೆ ಸಮೇತ ಮಂಗಳೂರು ಜಿಲ್ಲಾಧಿಕಾರಿಗಳು ಹಾಗೂ ಆಯುಷ್ ಇಲಾಖೆ, ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಸಚಿವರ ಕೈ ಸೇರಿದೆ.
ಬೇಡದ ಜಾಗದಲ್ಲಿ ಸಿಸಿ ಟಿವಿ ಇಟ್ಟುಕೊಂಡು, ಮಹಿಳಾ ಸಿಬ್ಬಂದಿಗಳು ಇವನ ಹಣೆಬರಹ ಹೊರಗೆ ಹಾಕಿ, ನೆಟ್ಟಗೆ ಮಹಿಳಾ ಸಿಬ್ಬಂದಿಗಳ ಮುಖ ನೋಡಿ ಮಾತನಾಡದ ಪರಿಸ್ಥಿತಿ ಇವನದ್ದಾಗಿದೆ.
ಎಲ್ಲಾ ದಾಖಲೆಗಳು ಮಾಧ್ಯಮ ಕೈ ಸೇರಿದ್ದು ಹೇಗೆ ಎಂದು ಎಲ್ಲಾ ಸಿಬ್ಬಂದಿಗಳ ತಲೆ ತಿನ್ನುವ ಈತ, ಪರೋಕ್ಷವಾಗಿ ತಾನೇ ಕಳ್ಳ ಎಂದು ಒಪ್ಪಿಕೊಳ್ಳುವ ಸ್ಥಿತಿ ತಾನೇ ನಿರ್ಮಾಣ ಮಾಡಿಕೊಂಡು ಇಂಗು ತಿಂದ ಮಂಗನಂತಾಗಿದ್ದಾನೆ.
ಸುಮಾರು 10 ತಿಂಗಳ ಹಿಂದೆ ದಲಿತ ಸಿಬ್ಬಂದಿಯೊಬ್ಬ ಇವನ ಜಾತಕ ಎಲ್ಲಾ ಇವರ ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳ ವಾಟ್ಸಪ್ ಗುಂಪಿನಲ್ಲಿ ಶೇರ್ ಮಾಡಿ, ಆತ ರಾಜೀನಾಮೆ ನೀಡಿ, ಅದು ಇಡೀ ರಾಜ್ಯದ ಗಮನ ಸೆಳೆದಿದೆ.
ಸಾಲದ್ದಕ್ಕೆ ಅವನನ್ನು ಪೋಲೀಸ್ ವಶಕ್ಕೆ ಒಪ್ಪಿಸಲು, ಬೇರೆ ಸಿಬ್ಬಂದಿಯ ದಾಖಲೆ ತಾನೇ ಅಡಗಿಸಿ ಇಟ್ಟು, ಅದನ್ನು ರಾಜೀನಾಮೆ ನೀಡಿದ ಸಿಬ್ಬಂದಿಗಳ ಮೇಲೆ ಹಾಕಲು, ತನ್ನ ಉಳಿದ ಸಿಬ್ಬಂದಿಗಳಿಗೆ ಒತ್ತಡ, ಬೆದರಿಕೆ ಹಾಕಿ, ಕಾಣೆಯಾದ ದಾಖಲೆ, ರಾಜೀನಾಮೆ ನೀಡಿದ ಸಿಬ್ಬಂದಿ ಎಗರಿಸಿದ್ದಾರೆ ಎಂದು ಡೋಂಗಿ ಕಥೆ ಹೆಣೆಯುವ ಸಾಹಸ ಮಾಡಿ ಈಗಾಗಲೇ ಸ್ವಲ್ಪ ಹೇಸಿಗೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ, ಇವನು ಇವನ ಕೈ ಗೊಂಬೆಯಾದ ಐದು ಖದೀಮ ಕಳ್ಳ ಆಯುಷ್ ಅಧಿಕಾರಿಗಳು ಒಟ್ಟಿಗೆ ತಾವೇ ತೋಡಿಕೊಂಡ ಖೆಡ್ಡಾ ಗೆ ಬೀಳಲಿದ್ದಾರೆ.
ಇವನ ಅಸಹ್ಯ ಗ್ಯಾಂಗ್ ನ ಪ್ರಮುಖ ಸದಸ್ಯ, ವೆನ್ ಲಾಕ್ ಆಯುಷ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಏಕಾಂತದಲ್ಲಿ, ಮಹಿಳಾ ಸಿಬ್ಬಂದಿಗಳನ್ನು ಕರೆದು ತನ್ನ ಎದೆ ನೋವು ಎಂದು ನಾಟಕ ಮಾಡಿ ಇ ಸಿ ಜಿ ಮಾಡಲು ಹೇಳಿ, ಸಿಬ್ಬಂದಿಗಳು ಇವನ ಮಾತಿಗೆ ಛೀಮಾರಿ ಹಾಕಿದ್ದಾರೆ.
ಹಳೆಯ ಫ್ರಿಜ್ ಖರೀದಿ ಮಾಡಿ ಹೊಸ ಫ್ರಿಜ್ ಖರೀದಿ ತೋರಿಸುವುದು, ಅದರಲ್ಲಿ ತಾಜಾ ಮೀನು ಶೇಖರಣೆ ಮಾಡುವುದು, ಅಲೋಪಥಿ ಆಸ್ಪತ್ರೆಯಲ್ಲಿ ಬೇಕಾದ ಉಪಕರಣ ಡಮ್ಮಿ ಖರೀದಿ ಮಾಡುವುದು, ಯಾವುದೇ ಉಪಕರಣ ಜ್ಞಾನ ಇಲ್ಲದೇ ಇರುವ ಈ ತುಘಲಕ್ ತಂಡ ಇಲ್ಲ ಸಲ್ಲದ ಆಸ್ಪತ್ರೆ ಪರಿಕರ ಖರೀದಿ ತೋರಿಸಿ 28ಲಕ್ಷ ಸಿ ಎಸ್ ಆರ್ ಫಂಡ್ ಲೂಟಿ ಮಾಡಿದ್ದೂ ಅಲ್ಲದೇ ,ಅಂದಿನ ಜಿಲ್ಲಾಧಿಕಾರಿಯವರ ಎಮ್ ಆರ್ ಪಿ ಎಲ್ ಗೆ ಬರೆದ ಮನವಿ ಪತ್ರದ ನಕಲು ಮಾಡಿ ,ರೋಟರಿ, ಲಯನ್, ದೊಡ್ಡ ಉದ್ಯಮಿಗಳನ್ನು, ಕಾರ್ಪುರೇಟ್ ಫಂಡ್ ಬರುವ ಜಾಗಕ್ಕೆ ಅದೇ ಮನವಿ ಪತ್ರ ಭಟ್ಟಿ ಇಳಿಸಿದ್ದಾನೆ.
ಮಂಗಳೂರು ಶಾಸಕರೊಬ್ಬರ ಲೆಟರ್ ಹೆಡ್ ತಾನೇ ಎಗರಿಸಿ ಇವನೇ ಒಂದೇ ಮಾದರಿಯ ಮನವಿ ಪತ್ರ ಮಾಡಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಸಿ ಬರೆದ ಪತ್ರಕ್ಕೆ ಶಾಸಕರ ಸಹಿ ಹಾಕಿಸಿದ್ದಾನೆ.
ಒಟ್ಟಾರೆ ಎನ್ ಎಮ್ ಪಿ ಟಿ ಫಂಡ್ ಕೂಡಾ ಎಗರಿಸಿರಬಹುದು ಎನ್ನುವ ಗುಮಾನಿ ಇದ್ದು, ಇವನ ಹಣಕಾಸಿನ ವ್ಯವಹಾರ ಎಲ್ಲ ವೂ ಸಂಪೂರ್ಣ ತನಿಖೆ ಆಗಬೇಕಿದೆ.ಇಂತಹ ಅಕ್ರಮ, ಸಕ್ರಮ ಎಂದು ಮಾಡಲು ಬಳ್ಳಾರಿ ಚೋರ ,ಜೋಕಟ್ಟೆ ಅಧಿಕಾರಿಯ ನೇತೃತ್ವದಲ್ಲಿ ಕಮಿಟಿ ಮಾಡಿ ಎಲ್ಲವೂ ಸರಿಯಾಗಿದೆ ಎಂದು ಅಪ್ರೂವಲ್ ಮಾಡಿಸಿಕೊಂಡಿದ್ದಾರೆ.
ಎಲ್ಲದಕ್ಕೂ ತಣ್ಣೀರು ಎರಚುವ ತಣ್ಣೀರು ಪಂತದ ಅಧಿಕಾರಿ ಒಬ್ಬ ಯಾವ ರೀತಿ ಅಕ್ರಮ ಮಾಡಲು ಲೆಕ್ಕಾಚಾರ ಹಾಕಬಹುದು ಎಂದು ಪೆನ್ಸಿಲ್ ನಲ್ಲಿ ಬರೆದ ದಾಖಲೆ ಕೂಡಾ ಮಾಧ್ಯಮದ ಬಳಿ ಇದೆ.
ಇವನ ಜೀತದಂತಿರುವ ಅಧಿಕಾರಿ, ಬೇಡದ ಗೊಂದಲಗಳನ್ನು ಸೃಷ್ಟಿಸಿ ಇದೀಗ ಇಲಾಖೆಯ ಶೋಕಾಸ್ ಪಡೆದಿದ್ದು ಇದೀಗ ಎಲ್ಲಾ ಮುಚ್ಚಿಸುವ ಹುನ್ನಾರ ಮಾಡಿ, ಒಮ್ಮೊಮ್ಮೆ ಎಲ್ಲಾ ಮೂರ್ಖರು ಸಿಬ್ಬಂದಿಗಳ ಎದುರಿನಲ್ಲಿ, ವಿಲಕ್ಷಣವಾಗಿ, ತನಗೆ ಏನೂ ಆಗಿಲ್ಲ ಎಂಬಂತೆ ಗಹಗಹಿಸಿ ನಗುವುದು, ತನಗೆ ತನ್ನ ಖದರ್ ಕಾಪಾಡುತ್ತದೆ ಎಂದೋ ಏನೋ ವಿಚಿತ್ರವಾಗಿ ವರ್ತನೆ ಮಾಡುವ ದಾಖಲೆ ಕೂಡಾ ಮಾಧ್ಯಮದ ಕೈ ಸೇರಿದೆ.
ಇವನ ವರ್ತನೆ ಹಾಳಾಗಿದ್ದು, ಜಾತಿರಾಜಕೀಯದ ಖದರ್ನಲ್ಲಿ..ಅಲ್ಲಿಂದ ಆಪ್ತ ಸಹಾಯಕನ ರೋಲ್ ಮಾಡಿ, ಎಲ್ಲಾ ಅಧಿಕಾರಿಗಳ ಫೋನ್ ನಂಬರ್ ಪಡೆದು, ಕೆಲವು ರಾಜಕಾರಣಿಗಳಿಗೆ ತನ್ನ ಖದರ್ ಮುಖವಾಡ ತೋರಿಸಿ ,ಎಲ್ಲರಿಗೂ ನಂಬಿಕೆ ಬರುವಂತೆ ಮಾಡಿ ,ಎಲ್ಲವೂ ಇವನ ಖದರ್ ನುಂಗಿಹಾಕಿ, ಅದೇ ಖದರ್ ತನ್ನ ರಕ್ಷಣೆ ಮಾಡಿಯೇ ಮಾಡುತ್ತದೆ ಎನ್ನುವುದು ಇವನ ಲೆಕ್ಕಾಚಾರ.
ಚಿಕ್ಕಮಗಳೂರ ಚಿಕ್ಕ ಮಲ್ಲಿಗೆಯೊಂದು ಒಂದೇ ಜಾಗದಲ್ಲಿ ಬೇರೂರಿರುವ ಸುದ್ದಿ ಆಗಿದ್ದು, ಈ ಮಂಗಳೂರು ಮೀನು, ಕೊಚ್ಚಿಗೆ ಗಂಜಿ ಎರಡೂ ತಮ್ಮಲ್ಲೇ ಎಕ್ಸ್ಚೇಂಜ್ ಆಫರ್ಗೆ ರೆಡಿ ಮಾಡುವ ಗುಸುಗುಸು ಹಬ್ಬಿತ್ತು. ಚಿಕ್ಕಮಗಳೂರು ಮಾಡಿದ ಗೋಲ್ ಮಾಲ್ ಆಡಿಟ್, ಮಂಗಳೂರು ಮೀನು ಮಾಡಿದ ಬ್ರಹ್ಮಾಂಡ ಭೃಷ್ಟಾಚಾರ ಎರಡೂ ಮ್ಯೂಚುಯಲ್ ಗೆ ಯೋಗ್ಯ ಎಂದೂ ತಾವೇ ಭಾವಿಸಿಕೊಂಡು ಖದರ್ ಅಥವಾ ಮರಿ ಖದರ್ ನಲ್ಲಿ ವರ್ಗಾವಣೆ ಮಾಡಿಸಿಕೊಂಡು ಬರುತ್ತೇವೆ ಎಂದೂ ಸುದ್ದಿ ಹಬ್ಬಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಚೈನ್ ಸ್ಮೋಕರ್ ಈತ ಹಾರ್ಟ್ ವಿಲವಿಲ ಆಗಿ ಚೇತರಿಸಿ,ಅದನ್ನೇ ಮಾನದಂಡ ಮಾಡಿ ಇದೇ ಹುದ್ದೆಗೆ ಅಂಟಿಕೊಳ್ಳಲು,ಇದೇ ಅನಾರೋಗ್ಯ ಮಾನದಂಡ ಮಾಡಿಕೊಂಡಿದ್ದ.
ಹಿಂದಿನ ಆರೋಗ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿನ ಜಿಲ್ಲಾಧಿಕಾರಿ ಇಬ್ಬರೂ ವೆನ್ ಲಾಕ್ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿ, ಇವನ ಅಕ್ರಮ ಕುರಿತು ಪ್ರಶ್ನೆ ಮಾಡಿ, ಈತನ ಉತ್ತರಕ್ಕೆ ಅವಾಕ್ಕಾಗಿ, ಅಧಿಕಾರಿಗಳು” ಏನ್ರೀ ಇವನು, ಹೀಗೆ ಮಾತನಾಡುತ್ತಾನೆ” ಎಂದು ತಮ್ಮಲ್ಲೇ ಮಾತನಾಡಿಕೊಂಡು ಇದನ್ನು ಇಲಾಖೆ ತನಿಖೆಗೆ ಬರೆದರೆ, ಲೋಕಾಯುಕ್ತ ರುಚಿ ನೋಡಿದ ಹಕೀಮ ಇಲ್ಲಿಗೆ ಬಂದು ಗಡದ್ದಾಗಿ ಹೊಟ್ಟೆ ಬಿರಿಯುವಷ್ಟು ತಿಂದು , ಇಲಾಖೆಯ ವರದಿಯಲ್ಲಿ, ಮೇಲಕ್ಕೆ ವರದಿ ಸರಿ ಇಲ್ಲ ಅಂತ ಬರೆದು , ಕೆಳಗೆ ಪೇಮಂಟ್ ಮಾಡಬಹುದು ಎಂದು ಸಹಿ ಹಾಕಿ ನಗೆಪಾಟಲಿಗೀಡಾಗಿದ್ದ.ಮಂಗಳೂರು ಭೇಟಿ ಮಾಡಿದ್ದ ಅವನಿಗೆ ಮಾಧ್ಯಮ ಕರೆ ಮಾಡಿ ಸೂಕ್ತ ಎಚ್ಚರಿಕೆ ಕೂಡಾ ನೀಡಿತ್ತು.
ಜೋಕಟ್ಟೆ ಗೋಲ್ ಮಾಲ್ ರಾಜ, ಒಂದು ಕೋಟಿ ಎಗರಿಸುವ ದೊಡ್ಡ ಪ್ಲಾನ್ ಮಾಡಿ ,ಇವನಿಗೆ ಬೇಕಾದಾಗ ತನ್ನ ಚಿಕಿತ್ಸಾಲಯ, ಗ್ರಾಮೀಣ ಚಿಕಿತ್ಸಾಲಯ, ನುಂಗುವ ಬೇಕಾದಾಗ ಆರೋಗ್ಯ ಕೇಂದ್ರ ಈ ರೀತಿ ಮಾರ್ಪಾಡು ಮಾಡಿ, ದಿಕ್ಕು ದೆಸೆ ಇಲ್ಲದ ದೇಸಾಯಿ ಇವನ ಆಕ್ರಮಕ್ಕೆ ಸಾಥ್ ನೀಡಿದ್ದ.
ದಿನವಿಡೀ ಯಾವ ಯೋಜನೆ ,ಯಾವ ಫಂಡ್ ಎಗರಿಸುವ ತಲೆ ತುರಿಸುವ ಈತ ಮಂಗಳೂರು ಅಕ್ರಮಕ್ಕೆ ಗುರು ಸ್ಥಾನದಲ್ಲಿ ಇದ್ದು, ಇತ್ತೀಚೆಗೆ ಈತ ಹಗರಣ ಬೆಳಕಿಗೆ ಬಂದ ಮೇಲೆ ತನ್ನ ಬಾಸ್ ಸಹವಾಸ ಸಾಕು ಎಂದು ಇಲಾಖೆಯ ಆಪ್ತರಲ್ಲಿ ಹೇಳಿಕೊಂಡು ನಾಟಕ ಮಾಡಿದ್ದ.
ಉಳ್ಳಾಲ ರಾಣಿ ಮೊದ ಮೊದಲು ಕೆಲಸ ಅರ್ಧವೇ ಮಾಡಿ ,ಮಧ್ಯಾಹ್ನ ಹಿಲ್ ಹ್ಯಾಟ್ ಬಳಿಗೆ ಬರುವುದು ಸಾಮಾನ್ಯವಾಗಿತ್ತು.
ಶೋಭೆ ಇಲ್ಲದ ರಾಣಿ, ಇಲಾಖೆಯ ಅರ್ಧಂಬರ್ಧ ಖಾಲಿಯಾದ ಸೋಪು, ಇತರ ಸಾಮಾನು ಮನೆಗೆ ಕೊಂಡೊಯ್ಯವ ಅಸಹ್ಯ ಚಾಳಿ ಹೊಂದಿದ್ದು, ಈ ಹಿಲ್ ಹ್ಯಾಟ್ ರಾಣಿ ಮಹಾತ್ಮೆ ತಾನು ಕುರ್ಚಿ ತ್ಯಾಗ ಅವರಿಗೆ ಮಾಡಲು ಹೊರಟಿದ್ದಾನಂತೆ.
ಒಟ್ಟಾರೆ ಈ ನಾಲಾಯಕ್ ದರ್ಬಾರು, ಮಾಧ್ಯಮಕ್ಕೆ ಮಾಹಿತಿ ಸೋರಿಕೆ ಆಗುವುದು ಹೇಗೆ ಎಂದೂ, ತನ್ನನ್ನು ಈ ಸ್ಥಿತಿಗೆ ತಂದವರನ್ನು ಬಿಡುವುದಿಲ್ಲ ಎಂದೂ ಎಲ್ಲರ ಸಮಕ್ಷಮ ಒದರಿ, ಅವರ ಮುಖ ಚರ್ಯೆ ನೋಡುತ್ತಾ, ಕೆಲಸವೇ ಮಾಡದೇ ದಿನಕಳೆಯುವ ಪರಿಸ್ಥಿತಿ ಇವರದ್ದಾಗಿದೆ.
ಒಟ್ಟಾರೆ ಈ ಗ್ಯಾಂಗ್ ತೊಲಗಲಿ ,ಆಯುಷ್ ಉದ್ದಾರ ಆಗಲಿ ಎನ್ನುವುದು ಮಂಗಳೂರು ಆಯುಷ್ ಪ್ರೇಮಿಗಳ ಕನಸಾಗಿಯೇ ಉಳಿದಿದೆ.