ಪಿವಿ ವಿಶೇಷ

ಹಾಸನದಲ್ಲಿ ಆಶ್ಲೀಲ ಪೆನ್‍ಡ್ರೈವ್ ಹಂಚಿಸಿದ್ದೇ ವಿಜಯೇಂದ್ರ‌; ಯತ್ನಾಳ ಗಂಭೀರ ಆರೋಪ

ವಿಜಯಪುರ: ಭ್ರಷ್ಟ ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷನೆಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ವಿಜಯೇಂದ್ರನ ನಾಲ್ಕಾರು ಚೇಲಾ ಶಾಸಕರ ಹೊರತಾಗಿ 55ಕ್ಕೂ ಹೆಚ್ಚು ಶಾಸಕರ ವಿರೋಧವಿದ್ದು, ಈ ಬಗ್ಗೆ ಹೈಕಮಾಂಡ್ ನಾಯಕರನ್ನು ನಾವು ಪ್ರಶ್ನಿಸುತ್ತೇವೆ. ಪಕ್ಷದಲ್ಲಿ ಹೈಕಮಾಂಡ್ ಭ್ರಷ್ಟ ವಿಜಯೇಂದ್ರನನ್ನು ವಿರುದ್ಧ ಕ್ರಮ ಕೈಗೊಳ್ಳಲಿ, ತಪಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವ ನನ್ನನ್ನು ಹೊರ ಹಾಕಲಿ ಎಂದು ರಾಜ್ಯದ ಜನರಿಗೆ ಹೇಳುತ್ತೇನೆ. ಪಕ್ಷದ ಹೈಕಮಾಂಡ ಯತ್ನಾಳ‌ ಪಕ್ಷ ವಿರೋಧ ಚಟುವಟಿಕೆ ಮಾಡುತ್ತಿದ್ದಾರೆ ಎಂದು ನನ್ನನ್ನು ಹೊರಹಾಕಲಿ. ನನ್ನ ಭ್ರಷ್ಟಾಚಾರ ಇದ್ದರೆ ಹೊರ ಹಾಕಲಿ, ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ವಿಜಯೇಂದ್ರಗೆ ಆಗಿರುವ ಸೆಟ್‍ಬ್ಯಾಕ್ ಏನೇಂದರೆ ನಿಂತು ಸಹಿ ಮಾಡಿಸಿಕೊಂಡಿದ್ದು, ಈ ಮನುಷ್ಯ ವಿಜಯೇಂದ್ರ ಅಡ್ಜಸ್ಟಮೆಂಟ್ ಇದ್ದಾನೆ. ನಾನು ಹೈಕಮಾಂಡನ್ನು ಇದೇ ಕೇಳುತ್ತೇನೆ, ವಿಜಯೇಂದ್ರನ ಕೃಪೆಯಿಂದ ಉಮೇಶ ಕಾಂಟ್ರಾಕ್ಟರ್ ಮನೆಯಲ್ಲಿ ಸಿಕ್ಕ ಸಾವಿರ ಕೋಟಿ ರೂ ಮೌಲ್ಯದ ದಾಖಲೆಗಳು, ಕೌಂಟಿಂಗ್ ಮಾಡುವ ನಾಲ್ಕು ಮಸೀನ್ ಸಿಕ್ಕವಲ್ಲ ಅವೆಲ್ಲ ಎಲ್ಲಿ ಹೋದವು ಎಂದು ಪ್ರಶ್ನಿಸಿದರು.

ವಿಜಯೇಂದ್ರ, ಯಡಿಯೂರಪ್ಪ ಕುಟುಂಬವೇ ಬೇಕು ಎಂದಾದರೆ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಲಿದೆ. ಪಕ್ಷದಲ್ಲಿ ವಿಜಯೇಂದ್ರ ವಿರುದ್ಧ ಅಸಮಾಧಾನ ಹೆಚ್ಚಿದೆ. ಪಕ್ಷದಲ್ಲಿ ಅವರ ವಿರುದ್ಧ ಧ್ವನಿ ಎತ್ತಲು ಸಾಧ್ಯವಿಲ್ಲದ ಬಹುತೇಕ ಶಾಸಕರೊಂದಿಗೆ ಯವ ರೀತಿ ಮಾತನಾಡಬೇಕು ಎಂಬ ಅರಿವಿಲ್ಲದ ವಿಜಯೇಂದ್ರ ದುರಹಂಕಾರಿ ವರ್ತನೆ ತೋರುತ್ತಿರುವುದಾಗಿ ಎಂದು ಹೇಳುತ್ತಿದ್ದಾರೆ ಎಂದರು.

ಪೆನ್‌ ಡ್ರೈವ್‌ ಹಂಚಿದ್ದೇ ವಿಜಯೇಂದ್ರ

ಹಾಸನದಲ್ಲಿ ಪ್ರಜ್ವಲ ಅಶ್ಲೀಲ ಪ್ರಕರಣದಲ್ಲಿ ತಮ್ಮ ಚೇಲಾಗಳಿಂದ ಪೇಪರ್‌ ಗಳಲ್ಲಿ ಇಟ್ಟು ಪೆನ್‌ ಡ್ರೈವ್‌ ಹಂಚಿಸಿದ್ದೆ ವಿಜಯೇಂದ್ರ ಎಂದು ಗಂಭೀರ ಆರೋಪ ಮಾಡಿದ ಯತ್ನಾಳ್, ಪಕ್ಷದಲ್ಲಿ ಈಗ ಪದಾಧಿಕಾರಿಗಳಾಗಿ ಇರುವ ಶೇ.50 ರಷ್ಟು ಸಿ.ಡಿ, ಕಂಪನಿಯೇ ಇದೆ ಎಂದು ವಾಗ್ದಾಳಿ ನಡೆಸಿದರು.

ಹಾಸನದಲ್ಲೊಬ್ಬ ಕಡಿಮೆ ಅಂತರದಿಂದ ಶಾಸಕನಾಗಿ ಆಯ್ಕೆಯಾದರೆ ರಾಜೀನಾಮೆ ನೀಡುವುದಾಗಿ ಅಹಂಕಾರ ತೋರಿದ ಪುಣ್ಯಾತ್ಮನನ್ನು ಜನರು ಸೋಲಿಸಿದರು. ಕುಮಾರಸ್ವಾಮಿ ಕುಟುಂಬದ ಮಾನ-ಮರ್ಯಾದೆ ಕಳೆದದ್ದೇ ವಿಜಯೇಂದ್ರ. ಆತನ ನಿರ್ದೇಶನದಿಂದಲೇ ಪೆನ್‍ಡ್ರೈವ್ ಹಂಚಿದ್ದು, ತಾಕತ್ತಿದ್ದರೆ ನನ್ನನ್ನು ಕೇಳಲಿ, ಬಿಜೆಪಿಯ ಪಕ್ಷ ಎಷ್ಟು ಎಂಎಲ್‍ಎಗಳನ್ನು ಬ್ಲಾಕ್ ಮೇಲ್ ಮಾಡುತ್ತೀರಿ ಎಂದು ಟೀಕಾ ಪ್ರಹಾರ ನಡೆಸಿದರು.

ಪಕ್ಷದಲ್ಲಿ ಹಿರಿಯರ ಬಗ್ಗೆ ವಿಜಯೇಂದ್ರಗೆ ಗೌರವೇ ಇಲ್ಲ. ಪಾದಯಾತ್ರೆ ಮಾಡುವ ಕುರಿತು ಪಕ್ಷದ ಹಿರಿಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿಲ್ಲ. ಅವರಪ್ಪ ಹೇಳಿದ, ಬಾಡಿಗೆ ಜನರನ್ನು ತಂದು ಪಾದಯಾತ್ರೆ ಹೋರಾಟ ಮಾಡು, ನೀನು ಹೀರೋ ಆಗುತ್ತಿಯಾ ಎಂದು ಹೇಳಿದ, ವಿಜಯೇಂದ್ರ ತಾನೇ ಏಕಪಕ್ಷೀಯ ನಿರ್ಧಾರ ಕೈಗೊಂಡ ಎಂದು ವಾಗ್ದಾಳಿ ನಡೆಸಿದರು.

ಇಡೀ ರಾಜ್ಯ ನಮ್ಮ ಹಿಂದಿದೆ, ನಾವೇ ಲಿಂಗಾಯತ ಲೀಡರ್, ಯಡಿಯೂರಪ್ಪ ಕುಟುಂಬಕ್ಕೆ ಏನಾದರೂ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ಹಿನ್ನೆಡೆ ಆಗಲಿದೆ ಎಂದು ಬಿಂಬಿಸಿ ಹೈಕಮಾಂಡನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ರಮೇಶ ಜಾರಕಿಹೊಳಿಯೇ ಹೇಳಿದ್ದಾರೆ ಎಂದರು.

ನಾವಂತೂ ಅಂಜುವುದಿಲ್ಲ, ಇಂಥ ಭ್ರಷ್ಟರ ಕುಟುಂಬವನ್ನು ಮುಂದುವರೆಸುವಿರೋ, ನಮ್ಮಂಥ ಪ್ರಾಮಾಣಿಕರನ್ನು ಉಚ್ಛಾಟನೆ ಮಾಡುತ್ತೀರೋ ಎಂದು ಕೇಳುತ್ತೇವೆ. ಹೈಕಮಾಂಡ ಎದುರು ಈಗ ಇವೆರಡೇ ಆಯ್ಕೆ ಇವೆ ಎಂದರು.

Related Articles

Leave a Reply

Your email address will not be published. Required fields are marked *

Back to top button