ಪಿವಿ ವಿಶೇಷ

ಹಾಕಿ: 52 ವರ್ಷಗಳ ಬಳಿಕ ಭಾರತಕ್ಕೆ ಶರಣಾದ ಆಸ್ಟ್ರೇಲಿಯಾ

ಪ್ಯಾರಿಸ್ : ಇಲ್ಲಿ ಶುಕ್ರವಾರ ನಡೆದ ಪುರುಷರ ಹಾಕಿ ಪೂಲ್ ಬಿ ಪಂದ್ಯದಲ್ಲಿ ಭಾರತ ತಂಡವು 3-2 ಗೋಲುಗಳಿಂದ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ.

ಒಲಿಂಪಿಕ್ಸ್ ಪುರುಷರ ಹಾಕಿಯಲ್ಲಿ 52 ವರ್ಷಗಳ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಮೊದಲ ಐತಿಹಾಸಿಕ ಸಾಧನೆ ಮಾಡಿದೆ. ಈ ಹಿಂದೆ 1972ರ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆ ಬಳಿಕ ಸೋಲುಗಳನ್ನೇ ಕಂಡಿದ್ದ ಭಾರತ ಈಗ ಗೆದ್ದು ಪದಕದ ನಿರೀಕ್ಷೆ ಹೆಚ್ಚಾಗಿಸಿದೆ.

ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 2 ಗೋಲು ಗಳಿಸಿದರೆ, ಅಭಿಷೇಕ್ ಒಂದು ಗೋಲು ಬಾರಿಸಿದರು. ಆಸ್ಟ್ರೇಲಿಯಾ ಪರ ಥಾಮಸ್ ಕ್ರೇಗ್ ಮತ್ತು ಬ್ಲೇಕ್ ಗೋವರ್ಸ್ ಗೋಲು ಗಳಿಸಿದರು.

ಈಗಾಗಲೇ ಕ್ವಾರ್ಟರ್ ಫೈನಲ್ಸ್ ತಲುಪಿರುವ ಭಾರತ ಈ ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಬಿ ಪೂಲ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಬೆಲ್ಜಿಯಂ ಪೂಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತ ನ್ಯೂಜಿ ಲ್ಯಾಂಡ್ ವಿರುದ್ಧ ಜಯದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತ್ತು, ಅರ್ಜೆಂಟೀನಾ ವಿರುದ್ಧ ಡ್ರಾ ಮತ್ತು ನಂತರ ಐರ್ಲೆಂಡ್ ಅನ್ನು ಸೋಲಿಸಿತ್ತು.

Related Articles

Leave a Reply

Your email address will not be published. Required fields are marked *

Back to top button