ಪಿವಿ ವಿಶೇಷ

ದರ್ಶನ್ ವಿರುದ್ಧ ಸಿಕ್ಕಿದೆ ಬಲವಾದ ಸಾಕ್ಷ್ಯ! ಡಿಲೀಟ್ ಆಗಿದ್ದ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯ!

ಬೆಂಗಳೂರು: ದಿನಗಳು ಉರುಳಿದಂತೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ಗೆ ಸಂಕಷ್ಟಗಳು ಹೆಚ್ಚಾಗುತ್ತಿವೆ. ಕೊಲೆ ಕೇಸ್ ವಿಚಾರವಾಗಿ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದು, ಹೆಚ್ಚು ಹೆಚ್ಚು ಸಾಕ್ಷ್ಯಗಳನ್ನ ಸಂಗ್ರಹ ಮಾಡುತ್ತಿದ್ದಾರೆ.

ಇದೀಗ ದರ್ಶನ್‌ ವಿರುದ್ಧ ಪೊಲೀಸರಿಗೆ ಮತ್ತೊಂದು ಬಲವಾದ ಸಾಕ್ಷ್ಯ ಲಭಿಸಿದೆ. ಡಿಲೀಟ್ ಆಗಿದ್ದ ದರ್ಶನ್ ಮನೆಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಆ ಮೂಲಕ ಕೊಲೆ ನಡೆದ ದಿನ ಆರೋಪಿಗಳ ಚಲನವಲನಗಳ ಬಗ್ಗೆ ಪೊಲೀಸರಿಗೆ ಮಹತ್ವದ ಎವಿಡೆನ್ಸ್ ಸಿಕ್ಕಂತಾಗಿದೆ.

ದರ್ಶನ್‌ಗೆ ಕಂಟಕವಾಗುತ್ತಾ ಸಿಸಿಟಿವಿ ದೃಶ್ಯಾವಳಿ?

ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ದರ್ಶನ್ ಮನೆಯ ಸಿಸಿಟಿವಿ ದೃಶ್ಯಾವಳಿ ಡಿಲೀಟ್ ಆಗಿತ್ತು. ತನಿಖೆ ವೇಳೆ ದರ್ಶನ್ ಮನೆಯ ಸಿಸಿಟಿವಿ ಡಿವಿಆರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜೊತೆಗೆ ದರ್ಶನ್ ಮನೆಯಲ್ಲಿ ಹಲವು ಪ್ರಮುಖ ಸಾಕ್ಷ್ಯಗಳನ್ನೂ ಪೊಲೀಸರು ಸಂಗ್ರಹಿಸಿದ್ದರು. ಆನಂತರ ಸಿಸಿಟಿವಿ ಡಿವಿಆರ್‌ ಅನ್ನು ರಿಟ್ರೀವ್ ಮಾಡುವ ಸಲುವಾಗಿ ಸಿಐಡಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಕಳುಹಿಸಿದ್ದರು. ಇದೀಗ ಸಿಸಿಟಿವಿ ದೃಶ್ಯಾವಳಿ ರಿಟ್ರೀವ್ ಆಗಿದೆ. ಸಿಐಡಿ ಸೈಬರ್ ತಜ್ಞರು ಸಿಸಿಟಿವಿ ದೃಶ್ಯಾವಳಿಯನ್ನು ರಿಟ್ರೀವ್ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಸೆರೆ ಆಗಿರೋದೇನು?

ರಿಟ್ರೀವ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ದಿನ ದರ್ಶನ್ ಹಾಗೂ ಇತರೆ ಆರೋಪಿಗಳು ಮನೆ ಹೊರಗೆ ಬಂದು ಹೋಗಿರುವುದು ಪತ್ತೆಯಾಗಿದೆ. ಜೂನ್ 8, 9 ಹಾಗೂ 10 ರಂದು ಕೊಲೆ ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃತ್ಯಕ್ಕೆ ಬಳಸಿರುವ ವಾಹನಗಳ ಓಡಾಟವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ. ಶವ ಸಾಗಿಸಿದ ವಾಹನದಲ್ಲಿ ಫಿಂಗರ್ ಪ್ರಿಂಟ್ ಗುರುತುಗಳು ಪತ್ತೆಯಾಗಿದ್ದವು. ಅದೂ ಮತ್ತು ಆರೋಪಿಗಳ ಫಿಂಗರ್‌ ಪ್ರಿಂಟ್‌ ಮ್ಯಾಚ್‌ ಆಗಿದೆ ಎನ್ನಲಾಗಿದೆ.

ಸೆಕ್ಷನ್ 164 CRPC ಅಡಿಯಲ್ಲಿ ಹೇಳಿಕೆ ದಾಖಲು!

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ. ಕೆಲವರನ್ನ ಸಾಕ್ಷಿಗಳಾಗಿ ಪರಿಗಣಿಸಿರುವ ಪೊಲೀಸರು, ನ್ಯಾಯಾಧೀಶರ ಮುಂದೆ ಸೆಕ್ಷನ್ 164 CRPC ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರಿಂದ ದರ್ಶನ್‌ & ಗ್ಯಾಂಗ್‌ಗೆ ಮತ್ತಷ್ಟು ಕಂಟಕ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

Related Articles

Leave a Reply

Your email address will not be published. Required fields are marked *

Back to top button