ಭಟ್ಕಳ ನಗರದಲ್ಲಿ ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವ ಸವಾರರ ಮೇಲೆ ಕಠಿಣ ಕ್ರಮ – ಡಿ.ಎಸ್.ಪಿ ಮಹೇಶ ಎಮ್
ಭಟ್ಕಳ : ನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅತಿ ವೇಗ ಮತ್ತು ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವ ಸವಾರರನ್ನು ನಿಯಂತ್ರಿಸಲು ಟ್ರಾಪಿಕ್ ಪಿ.ಎಸ್.ಐ. ನವೀನ್ ನಾಯ್ಕ ಮತ್ತು ಅವರ ತಂಡ ಹೈವೆಯಲ್ಲಿ ರಾಡರ ಗನ್ ಕಾರ್ಯಾಚರಣೆ ನಡೆಸಿದರು.
ಭಟ್ಕಳ ನಗರ ಠಾಣೆಯ ಟ್ರಾಪಿಕ್ ಪಿ.ಎಸ್.ಐ. ನವೀನ್ ನಾಯ್ಕ ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಮೂವರು ವಾಹನ ಸವಾರರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ 3೦೦೦ ರೂ. ದಂಡ ವಿಧಿಸಿದ್ದಾರೆ.
ಭಟ್ಕಳ ನಗರ ಸಭಾ ವ್ಯಾಪ್ತಿಯಲ್ಲಿ ವಾಹನಗಳ ವೇಗದ ಮಿತಿ ಗಂಟೆಗೆ 30 ರಿಂದ 35 ಕಿ.ಮೀ ವೇಗ ಕಡ್ಡಾಯವಾಗಿ ನಿಗದಿಪಡಿಸಲಾಗಿದೆ. ಅತಿ ವೇಗ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವ ಸವಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭಟ್ಕಳ ಡಿ.ಎಸ್.ಪಿ ಮಹೇಶ ಎಮ್. ಕೆ. ಎಚ್ಚರಿಕೆ ನೀಡಿದ್ದಾರೆ.
ಭಟ್ಕಳ ಡಿ.ಎಸ್.ಪಿ ಮಹೇಶ ಎಮ್. ಕೆ. ಭಟ್ಕಳ ಠಾಣೆ ಪಿಐ ಗೋಪಿಕೃಷ್ಣ ಕೆ.ಆರ್. ಮಾರ್ಗದರ್ಶನದಲ್ಲಿ ಶಿವಾನಂದ ನಾವದಗಿ ಪಿ.ಎಸ್.ಐ (ಕಾ.ಸೂ), ಯಲ್ಲಪ್ಪ ಮಾದರ (ಪಿ.ಎಸ್.ಐ ತನಿಖೆ-1) ಹಾಗೂ ಸಿಬ್ಬಂದಿ ರಾಡಾರ್ ಗನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.