ನರೇಗಾದಡಿ ಮೇಕೆ ಶೇಡ್ ನಿರ್ಮಾಣ: ಅನುದಾನ ಬಿಡುಗಡೆ ಪಿಡಿಒ ತಾರತಮ್ಯ …!
“ಸ್ವಯಂ ಉದ್ಯೋಗ ಮಾಡಲು ಅವಕಾಶವಿಲ್ಲ ಆದಿವಾಸಿ ನಿರುದ್ಯೋಗಿ ಯುವಕನ ಅಸಹಾಯಕತೆ”
ಹನೂರು :- ನರೇಗಾ ಯೋಜನೆಯಡಿ ಮೇಕೆ ಶೇಡ್ ನಿರ್ಮಾಣ ಮಾಡಿದ್ದರು ಸರ್ಕಾರದಿಂದ ಸಿಗುವ ಅನುದಾನವನ್ನು ಬರಿಸಲು ಯಾವುದೇ ಕ್ರಮ ಕೈಗೊಳ್ಳದೇ ಪಿಡಿಒ ಮತ್ತು ಇಂಜಿನಿಯರ್ ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ನಿರುದ್ಯೋಗಿ ಯುವಕ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾನೆ. ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದ ಆದಿವಾಸಿ ಬುಡಕಟ್ಟು ಜನಾಂಗದ ಚಂದ್ರಪ್ಪ ಎಂಬ ವ್ಯಕ್ತಿಯು ನರೇಗಾ ಯೋಜನೆಯಡಿ ಮೇಕೆ ಶೆಡ್ ನಿರ್ಮಾಣ ಮಾಡಿದ್ದರು ಇದಕ್ಕೆ ಬರಬೇಕಾದ ಅನುದಾನಕ್ಕೆ ಪಿಡಿಒ ಲೋಕೇಶ್ ಮತ್ತು ಇಂಜಿನಿಯರ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಪೊನ್ನಾಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸ್ತೂರು ಗ್ರಾಮ ಆದಿವಾಸಿ ಬುಡಕಟ್ಟು ಜನಾಂಗದ (ಸೋಲಿಗರು) ಫಲಾನುಭವಿ ಚಂದ್ರಪ್ಪ ಬಿನ್ ಲೇಟ್ ತಮ್ಮಯ್ಯ ಎಂಬುವರ ಹೆಸರಿಗೆ ಕಳೆದ ಎರಡು ವರ್ಷಗಳ ಹಿಂದೆ ಮೇಕೆ ಶೆಡ್ ನಿರ್ಮಾಣ ಮಾಡಲು ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಚಂದ್ರಪ್ಪ ಅವರು ತಮ್ಮ ಜಮೀನಿನಲ್ಲಿ ಮೇಕೆ ಶೆಡ್ ನಿರ್ಮಾಣ ಮಾಡಿ ಸುಮಾರು 80% ಕಾಮಗಾರಿ ಮುಗಿದಿದೆ. ಈಗಾಗಲೇ ಚಂದ್ರಪ್ಪ ಮತ್ತು ಮಹದೇವಮ್ಮ ಇಬ್ಬರಿಗೂ ನರೇಗಾ ಕೂಲಿ ಹಣ 4944 ರೂ. ಮಾತ್ರ ಬಂದಿದೆ. ಆದರೆ ಸಾಮಾಗ್ರಿ ಹಣ ಬರಿಸಲು ಪಿಡಿಒ ಇಂಜಿನಿಯರ್ ಅವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.ಚಂದ್ರಪ್ಪ ಬಿನ್ ಲೇಟ್ ತಮ್ಮಯ್ಯ ಎಂಬುವರ ಹೆಸರಿಗೆ ಮೇಕೆ ಶೆಡ್ಡು ನಿರ್ಮಾಣ ಕಾಮಗಾರಿ68 ಸಾವಿರ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಂಡು 80% ಕಾಮಗಾರಿ ಮುಗಿದಿದೆ. ಈ ಬಗ್ಗೆ ಪಿಡಿಒ ಮತ್ತು ಇಂಜಿನಿಯರ್ ಅವರಿಗೆ ತಿಳಿಸಿದ್ದರು ಅವರು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಒಬ್ಬರಿಗೊಬ್ಬರು ಸಬೂಬು ಹೇಳುತ್ತಾರೆ ಎಂದು ಚಂದ್ರಪ್ಪ ತನ್ನ ಅಸಹಾಯಕ ನೋವನ್ನು ವ್ಯಕ್ತಪಡಿಸಿದ್ದಾರೆ. ಮೇಕೆ ಶೆಡ್ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ವೇಳೆ ಇತರರು ಸಹ ಮೇಕೆ ಶೆಡ್ಡು ಕಾಮಗಾರಿಗಳನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಅವರುಗಳಿಗೆ ನರೇಗಾ ಕೂಲಿ ಹಣ ಮತ್ತು ಸಾಮಾಗ್ರಿ ಹಣ ಪಾವತಿ ಮಾಡಲಾಗಿದೆ. ಆದರೆ ನಾವು ನರೇಗಾದಡಿ ಮೇಕೆ ಶೆಡ್ ನಿರ್ಮಾಣ ಮಾಡಿ ಎರಡು ವರ್ಷಗಳ ಕಳೆದಿದ್ದರೂ ಪಿಡಿಒ ಇಂಜಿನಿಯರ್ ಅವರು ಇದುವರೆಗೆ ಭೇಟಿ ನೀಡಿಲ್ಲ.
ಪೊನ್ನಾಚಿ ಗ್ರಾಮ ಪಂ. ವ್ಯಾಪ್ತಿಯಲ್ಲಿ ಮೇಕೆ ಶೆಡ್ ನಿರ್ಮಾಣ ಇತರೆ ಕಾಮಗಾರಿಗಳನ್ನು ಅರೆಬರೆ ಮಾಡಿರುವುದಕ್ಕೆ ಕೂಲಿ ಹಣ ಮತ್ತು ಸಾಮಾಗ್ರಿ ಬಿಲ್ಲು ಪಾವತಿಮಾಡಲಾಗಿದೆ. ಆದರೆ ನಾವು ನಿರ್ಮಾಣ ಮಾಡಿರುವ ಮೆಕೇಶವ ಕಾಮಗಾರಿಯನ್ನು ಪರಿಶೀಲನೆ ನಡೆಸಲು ಬರುತ್ತಿಲ್ಲ. ಪಿಡಿಒ ಅವರು ಲಂಚದ ಹಣಕ್ಕೆ ಪರೋಕ್ಷವಾಗಿ ಬೇಡಿಕೆ ಇಡುತ್ತಾರೆ ಎಂದು ಫಲಾನುಭವಿ ಸಹೋದರ ಮಾದೇಶ್.ಟಿ ಆರೋಪ ಮಾಡಿದ್ದಾರೆ.ಸ್ವಯಂ ಉದ್ಯೋಗ ಮಾಡಬೇಕೆಂಬ ದೃಷ್ಟಿಯಿಂದ ಮೇಕೆ ಶೆಡ್ಡು ಮಾಡಿಕೊಂಡು ಮೇಕೆ ಸಾಗಾಣಿಕೆ ಮಾಡಿ ಜೀವನೋಪಾಯ ಕಂಡುಕೊಳ್ಳುವ ಯೋಜನೆಯನ್ನು ರೂಪಿಸಿ ನರೇಗಾ ಯೋಜನೆಯಡಿ ಮೇಕೆ ಶೆಡ್ ನಿರ್ಮಾಣ ಮಾಡಿದ್ದರು ಸರ್ಕಾರದ ಅನುದಾನ ಪಡೆಯುವ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಸೋಲಿಗ ಸಮುದಾಯಕ್ಕೆ ಯಾವುದೇ ರೀತಿ ಸೌಲಭ್ಯಗಳು ತಲುಪುತ್ತಿಲ್ಲ. ನಾವು ಸ್ವಂತ ಉದ್ಯೋಗ ಮಾಡೋಣ ಎಂಬ ದೃಷ್ಟಿಯಿಂದ ಗ್ರಾಮ ಪಂ. ನರೇಗಾ ಯೋಜನೆಯಡಿಯಲ್ಲಿ ಮೇಕೆಶೆಡ್ ನಿರ್ಮಾಣ ಮಾಡಿಕೊಂಡು ಮೇಕೆಗಳ ಸಾಕಾಣಿಕೆಯಿಂದ ಜೀವನೋಪಾಯ ಕಂಡುಕೊಳ್ಳುವ ಪ್ರಯತ್ನದಲ್ಲಿ ಮೇಕೆಶೆಡ್ ಕಾಮಗಾರಿಯನ್ನು ಪ್ರಾರಂಭಿಸಿದ್ದೇವೆ. ಇದಕ್ಕೂ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮಂತ ಯುವಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.