ಪಿವಿ ವಿಶೇಷ

ಕೆ-ಶಿಫ್ ರಸ್ತೆ ಕಾಮಗಾರಿ: ತರಾತುರಿಯಲ್ಲಿ ಅವೈಜ್ಞಾನಿಕ ಪೈಪ್ ಅಳವಡಿಕೆ..!

ಉದ್ಘಾಟನೆಗೂ ಮುನ್ನಮುರಿದು ಬಿದ್ದ ಕಳಪೆ ಚರಂಡಿ ಸ್ಲಾಬ್

ಹನೂರು :- ಪಟ್ಟಣದಲ್ಲಿ ಕೈಗೊಂಡಿರುವ ಕೆ-ಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಕುಡಿಯುವ ನೀರು ಸರಬರಾಜು ಪೈಪ್ ಲೈನ್ ಅವೈಜ್ಞಾನಿಕವಾಗಿದ್ದು ಕಳಪೆ ಪೈಪ್ ಬಳಕೆ ಮಾಡಿ ತರಾತುರಿಯಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಹನೂರು ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕೆ- ಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ. ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದ ಪೈಪ್‌ಗಳನ್ನು ಅಲ್ಲಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ಕಡಿಮೆ ಗುಣಮಟ್ಟದ ಪೈಪ್ ಬಳಕೆ ಮಾಡಲಾಗುತ್ತದೆ.ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸುಸಜ್ಜಿತವಾಗಿ ಇತ್ತು. ಈ ಹಿಂದೆ ಗುಣಮಟ್ಟದ ಪೈಪ್ ಅಳವಡಿಕೆ ಮಾಡಿ ಬಡಾವಣೆಯ ವಿವಿಧಡೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಇದರಿಂದ ಪೈಪ್ ಹೊಡೆದು ಹೋಗುವುದು ನೀರು ಸರಬರಾಜು ವ್ಯವಸ್ಥೆಯಲ್ಲಿ ತೊಂದರೆಯಾಗಿಲ್ಲ.

ಕೆ-ಶಿಫ್ ರಸ್ತೆ ಕಾಮಗಾರಿ ಅಧಿಕಾರಿಗಳು ಸಿಬ್ಬಂದಿಗಳು ತಾವು ಕೈಗೊಂಡಿರುವ ಕಾಮಾಗಾರಿ ಆದಷ್ಟು ಬೇಗ ಮುಗಿಸಬೇಕೆಂಬ ದೃಷ್ಟಿಯಿಂದ ಆತುರಾತುರವಾಗಿ ಕಾಮಗಾರಿ ಮಾಡುವುದರ ಜೊತೆಗೆ 5 ಇಂಚು ನೀರು ಸರಬರಾಜು ಪೈಪ್ ಇರುವ ಕಡೆ 4 ಇಂಚು ಪೈಪ್ ಅಳವಡಿಕೆಸುವುದು. 3 ಇಂಚು ಇರುವ ಪೈಪ್ ಬದಲಿಗೆ 2 ಇಂಚು ಪೈಪ್ ಅಳವಡಿಕೆಸುವುದು ಹೀಗೆ ಕಳಪೆ ಗುಣಮಟ್ಟದ ಪೈಪ್ ಅಳವಡಿಕೆ ಮಾಡುತ್ತಿದ್ದಾರೆ.ಪುಟ್ ಪಾತ್ ರಸ್ತೆಯ ಕೆಳಗೆ ಪೈಪ್ ಅಳವಡಿಕೆ ಕಾಮಗಾರಿ ಮಾಡಲಾಗುತ್ತಿದ್ದು. ಹೆಚ್ಚಿನ ನೀರು ಸರಬರಾಜು ಮಾಡಬೇಕಾಗಿರುವ ಕಡೆ, ಕಡಿಮೆ ನೀರು ಸರಬರಾಜು ಪೈಪ್ ಅಳವಡಿಕೆ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ನೀರು ಸರಬರಾಜು ಮಾಡುವಾಗ ನೀರು ಸರಬರಾಜು ರಭಸಕ್ಕೆ ಪೈಪ್ ಹೊಡೆದು ದುರಸ್ತಿಯಾಗುವ ಸಂಭವವಿದೆ. ಇದರಿಂದ ಮತ್ತೆ ಪೈಪ್ ದುರಸ್ತಿ ಪಡಿಸುವ ಕಾಮಗಾರಿಗೆ ಪದೇಪದೇ ಉದ್ಭವಿಸಲಿದೆ.

ಕೆ- ಶಿಫ್ ರಸ್ತೆ ಚರಂಡಿ ಫುಟ್ಪಾತ್ ಕಾಮಗಾರಿ ವೇಳೆ ತರತುರೆಯಲ್ಲಿ ಅಳವಡಿಕೆ ಮಾಡುತ್ತಿರುವ ಕಳಪೆ ಪೈಪುಗಳನ್ನು ಪರಿಶೀಲಿಸಿ ಗುಣಮಟ್ಟದ ಅಳವಡಿಕೆ ಮಾಡಲು ಸಂಬಂಧಪಟ್ಟಂತೆ ಪಟ್ಟಣ ಪಂಚಾಯತ್ ಅಧಿಕಾರಿ ಆಡಳಿತ ಮಂಡಳಿ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಸಾರ್ವಜನಿಕರ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button