ವಿಜ್ಞಾನಿಗಳು ಮಾರ್ಟಳ್ಳಿ ಶಾಲೆಗೆ ಭೇಟಿ…!
ಹನೂರು :- ತಾಲ್ಲೂಕಿನ ಮಾರ್ಟಳ್ಳಿ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಇಸ್ರೋ ಮಾಜಿ ವಿಜ್ಞಾನಿಗಳು ಭೇಟಿ ಮಾಡಿ ಮಕ್ಕಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಮೂಡಿಸಿದರು. ಅನಿಷಾ ಸಾವಯವ ಕೃಷಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ವಲ್ಲಿರಾಜನ್ ಮತ್ತು ಶ್ರೀ ರಾಜನ್ ರವರ ಸಹಯೋಗದಲ್ಲಿ ಆಯೋಜನೆ ಗೊಂಡ ಅರ್ಧ ದಿನದ ಕಾರ್ಯಾಗಾರದಲ್ಲಿ ಇಸ್ರೋ ಮಾಜಿ ವಿಜ್ಞಾನಿಗಳಾದ ಹಿರಿಯಣ್ಣರವರು ಮೊದಲ ಅವಧಿಯಲ್ಲಿ ದಿನನಿತ್ಯ ಬಳಕೆಯ ಗಣಿತ ಹಾಗೂ ವಿಜ್ಞಾನದ ಚಟುವಟಿಕೆಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಗಣಿತ ಹಾಗೂ ವಿಜ್ಞಾನಗಳಲ್ಲಿ ಉತ್ತೇಜಸಿದರು. ಹಾಗೆಯೇ ಎರಡನೇ ಅವಧಿಯಲ್ಲಿ ಮಾತೋರ್ವ ಇಸ್ರೋ ಮಾಜಿ ವಿಜ್ಞಾನಿಯಾದ ಚಂದ್ರಬಾಬು.ವಿ ರವರು ಉಪಗ್ರಹಗಳ ಇತಿಹಾಸ ಹಾಗೂ ಭೂಮಿಯ ಚಲನೆಯ ಬಗೆಗೆ ಸವಿಸ್ತಾರವಾದ ವಿಷಯವನ್ನು ಮಂಡಿಸಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಪಾಠ ಕಲಿಕೆಗೆ ಪೂರಕವಾದ ಮಾಹಿತಿಯನ್ನು ನೀಡಿದರು.ಇದರಿಂದ ಸಂತಸಗೊಂಡ ಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ಟೆನ್ನಿ ಕುರಿಯನ್ ಹಾಗೂ ಮುಖ್ಯ ಶಿಕ್ಷಕರಾದ ಅನ್ನೈನಾದನ್ ಹಾಗೂ ಸಹ ಶಿಕ್ಷಕ/ಶಿಕ್ಷಕಿಯರು ತುಂಬು ಹೃದಯದಿಂದ ಅಭಿನಂದಿಸಿದರು.