ಪೊಲೀಸನಿಂದ ಅಕ್ರಮ ಸಾಗಣೆಯಾಗುತ್ತಿದ್ದ ಮದ್ಯವನ್ನು ಪೊಲೀಸರೆ ಸಿನಿಮೀಯ ಮಾದರಿಯಲ್ಲಿ ಬೆನ್ನಟ್ಟಿ ಹಿಡಿದ ಅಪರೂಪದ ಪ್ರಕರಣ..!
ಗೋವಾದಿಂದ ಗೋಕರ್ಣದಲ್ಲಿನ ರೆಸಾಟ್೯ಗಳಿಗೆ ಹಂಚಲು ಸಾಗಿಸುತ್ತಿದ್ದಾಗ ಮಿಂಚಿನ ಕಾರ್ಯಾಚರಣೆ ನಡಿಸಿ ಅಕ್ರಮ ಮಾಲಿನ ಸಮೇತ ಇಬ್ಬರು ಆರೋಪಿಗಳ ಬಂಧನ..!
ಕಾರವಾರದ ಕದ್ರಾ ಪೊಲೀಸ್ ಠಾಣೆಯ ಮುಖ್ಯ ಪೇದೆ ಲಮಾಣಿಯಿಂದ ಮುಖ ಭಂಗದ ಕೃತ್ಯ..!
ಕುಮಟಾ-ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಓಂ ಬೀಚ್ ಬಳಿ ಬುಧವಾರ ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿ ಆಗಿದ್ದಾರೆ. ಗೋಕರ್ಣ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಯೋಗಿಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ. ಕಾರವಾರದ ಕದ್ರಾ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೆಬಲ್ ಸಂತೋಷ ಲಮಾಣಿ ಈತ ಪ್ರಮುಖ ಆರೋಪಿ ಆಗಿದ್ದು, ಇತ ತನ್ನ ಕಾರಿನಲ್ಲಿ ಇದ್ದ 25960 ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಗೋವಾ ಮದ್ಯವನ್ನು ಗೋಕರ್ಣದಲ್ಲಿರುವ ಕೆಲ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಪೂರೈಕೆ ಮಾಡಲು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ. ಖಚಿತ ಮಾಹಿತಿ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕಾರು ತಡೆಯಲು ಮುಂದಾದಾಗ ಪೊಲೀಸರ ಮೇಲೆಯೇ ಚಲಾಯಿಸಲು ಯತ್ನಿಸಿದ್ದು, ಆದರೂ ಕೂಡ ಸಿಬ್ಬಂದಿ ಒಟ್ಟಾಗಿ ಧೈರ್ಯದಿಂದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬಂಧನ ಮಾಡಿದ್ದಾರೆ. ಗೋಕರ್ಣ ಪೊಲೀಸರು ದಾಳಿ ನಡೆಸಿ ಆರೋಪಿ ಹೆಡ್ ಕಾನ್ ಸ್ಟೆಬಲ್ ಸಂತೋಷ ಲಮಾಣಿ ಹಾಗೂ ಇನ್ನೋಬ್ಬ ಆರೋಪಿ, ಕಾರು, ಮದ್ಯ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ಪೊಲೀಸ್ ಸಿಬ್ಬಂದಿಯೇ ಇಂತಹ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದ ಎನ್ನುವುದು ಪೊಲೀಸ್ ಇಲಾಖೆಗೆ ಇರುಸು ಮುರುಸು ಉಂಟು ಮಾಡಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.ಪೊಲೀಸ್ ಸಿಬ್ಬಂದಿ ಆಗಿದ್ದ ಕಾರಣದಿಂದ ಯಾರೂ ಕೂಡ ತಪಾಸಣೆ ಮಾಡಲ್ಲ ಎಂಬ ಹಿನ್ನಲೆಯಲ್ಲಿ ಗೋವಾದಿಂದ ಅಕ್ರಮ ಮದ್ಯ ತಂದು ಬೀಚ್ನಲ್ಲಿ ಮಾರಾಟ ಮಾಡುತ್ತಿದ್ದ, ಪ್ರಕರಣ ಸಂಬಂಧ ಗೋಕರ್ಣ ಠಾಣೆಯಲ್ಲಿ ಪೊಲೀಸ ಸಿಬ್ಬಂದಿ ಸಂತೋಷ ಲಮಾಣಿ ವಿರುದ್ದ ಪ್ರಕರಣ ದಾಖಲಾಗಿದೆ.ಈ ಕಾರ್ಯಾಚರಣೆಯಲ್ಲಿ ಪಿಎಸ್ ಐ ಶಶಿಧರ, ಹೆಡ್ ಕಾನ್ ಸ್ಟೆಬಲ್ ನಾಗರಾಜ್, ಸುನೀಲ್ ಕೊಪ್ಪದ, ಚಾಲಕ ಗಣೇಶ್, ರಾಜೇಶ್, ವಸಂತ ಭಾಗವಹಿಸಿದ್ದರು.