ಕ್ರೈಂ ನ್ಯೂಸ್

ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿ ಅರೆಸ್ಟ್!

ಮೃತ ಸಂತೋಷ್ ಮಾರ್ಚ್ 1 ರಂದು ಬೆಳಗಾವಿ ತಾಲೂಕಿನ ಕಣಬರಗಿಗೆ ಬಂದಿದ್ದ. ಈ ವೇಳೆ ಪುಸಲಾಯಿಸಿ ಸ್ನೇಹಿತನನ್ನು ಮದ್ಯ ಕುಡಿಯಲು ಕರೆದುಕೊಂಡು ಹೋಗಿದ್ದ. ಮಾಲಿನಿ ನಗರ ಬಳಿ ಗದ್ದೆಯೊಂದರಲ್ಲಿ ಮದ್ಯಪಾನ ಮಾಡಿಸಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಳಗಾವಿ: ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು (Murder) ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಜೊತೆ ಅನೈತಿಕ (Immoral Relationship) ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ನೇಹಿತ ಸಂತೋಷ ಫರೀಟ್​​ನನ್ನು ಪರಶುರಾಮ ಕುರುಬರ ಕೊಲೆ ಮಾಡಿದ್ದಾನೆ. ಸಂತೋಷ್ ಫರೀಟ್(36) ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ನಿವಾಸಿ. ಆರೋಪಿ ಪರಶುರಾಮ ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ. ಕೊಲೆಯಾದ ಸಂತೋಷ್ ಪತ್ನಿ ಜೊತೆ ಪರಶುರಾಮ ಕುರಬರ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೇ ಪರಶುರಾಮ ಸ್ನೇಹಿತನ ಪತ್ನಿಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ.

ಮೃತ ಸಂತೋಷ್ ಮಾರ್ಚ್ 1 ರಂದು ಬೆಳಗಾವಿ ತಾಲೂಕಿನ ಕಣಬರಗಿಗೆ ಬಂದಿದ್ದ. ಈ ವೇಳೆ ಪುಸಲಾಯಿಸಿ ಸ್ನೇಹಿತನನ್ನು ಮದ್ಯ ಕುಡಿಯಲು ಕರೆದುಕೊಂಡು ಹೋಗಿದ್ದ. ಮಾಲಿನಿ ನಗರ ಬಳಿ ಗದ್ದೆಯೊಂದರಲ್ಲಿ ಮದ್ಯಪಾನ ಮಾಡಿಸಿ ಹತ್ಯೆ ಮಾಡಿದ್ದಾನೆ. ಟವೆಲ್​ನಿಂದ ಕತ್ತು ಹಿಸುಕಿ, ಭತ್ತದ ಬಣವೆಯಲ್ಲಿ ಶವವಿಟ್ಟು ಬೆಂಕಿ ಹಚ್ಚಿದ್ದ ಪರಶುರಾಮ ಪರಾರಿಯಾಗಿದ್ದ. ಪರಶುರಾಮ, ಸಂತೋಷ ಬೈಕ್ನಲ್ಲಿ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಬೈಕ್ ಸಮೇತ ಆರೋಪಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದಲ್ಲಿ ಚಿನ್ನಾಭರಣಗಳು ಕಳವು:
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಮನೆ ಕಿಟಕಿ ರಾಡ್ ಮುರಿದು ಕಳ್ಳತನ ನಡೆಸಿದ್ದಾರೆ. ನಾರಯಣಪ್ಪ ಅವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದ್ದು, 2 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಕಳುವಾಗಿದೆ. ತುಮಕೂರಿನ ಸಂಬಂಧಿ ಮನೆಗೆ ತೆರಳಿ ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಡಿಓ ಅಮಾನತ್ತು:
ಮೈಸೂರು: ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪಿಡಿಓ ಮಹೇಶ್ ಅಮಾನತ್ತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್ ಪೂರ್ಣಿಮಾ ಆದೇಶ ಹೊರಡಿಸಿದ್ದಾಋಎ. ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ದೂರು ನೀಡಿದ್ದ ಸದಸ್ಯರು ಕಾರ್ಯನಿರ್ವಾಹಕ ಅಧಿಕಾರಿಯಿಂದ ವರದಿ ಪಡೆದು ಅಮಾನತ್ತು ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಹೆಚ್ ಡಿ ಕೋಟೆ ತಾಲೂಕು ಆಲನಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಓ, ಗ್ರಾಪಂ ಸದಸ್ಯರ ನಡುವೆ ಕಿತ್ತಾಟ ನಡೆದಿತ್ತು.

ಸಿಲಿಂಡರ್ ಸ್ಫೋಟ; ತಪ್ಪಿದ ಭಾರಿ ಅನಾಹುತ:
ಬಾಗಲಕೋಟೆ: ಸಿಲಿಂಡರ್ ಸ್ಫೋಟವಾಗಿ ಮೂವರಿಗೆ ಗಾಯವಾಗಿದೆ. ನವನಗರದ ಸೆಕ್ಟರದ ನಂಬರ್ 40ರಲ್ಲಿ ಈ ಘಟನೆ ಸಂಭವಿಸಿದೆ. ಬಂಡಿವಡ್ಡರ್ ಎನ್ನುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ  ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಅಡುಗೆ ಮನೆಯಲ್ಲಿ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿವೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button