ಪೊಲೀಸರು ತಮ್ಮ ಪ್ರಾಣದ ಹಂಗು ಬಿಟ್ಟು ಬದುಕಿಸಿದ್ದ ಹಳೆ ಕಳ್ಳ ಈ ಬಾರಿ ದರೋಡೆಗೆ ಇಳಿದ, ಆಮೇಲೆ ಏನಾಯ್ತು?
ಫೆಬ್ರವರಿ 20ರಂದು ಲಾಂಗ್ ಬೀಸಿ ಅಂಗಡಿಗಳಲ್ಲಿ ಸುಲಿಗೆಗೆ ಯತ್ನಿಸಿದ್ದ ಹಳೆ ಕಳ್ಳ ಮಜರ್ ಮತ್ತು ಸೈಯದ್ ಮಾಜ್ನನ್ನು ಕೆ.ಜೆ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದರೋಡೆಗೆ ಯತ್ನಿಸಿದ್ದ ವೈರಲ್ ವಿಡಿಯೋವನ್ನು ಆಧರಿಸಿ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರು.
ಸುಲಿಗೆಗೆ ಯತ್ನಿಸಿದ್ದ ಹಳೆ ಕಳ್ಳ ಮಜರ್ ಮತ್ತು ಸೈಯದ್ ಮಾಜ್ನನ್ನು ಕೆ.ಜೆ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರು ಪೊಲೀಸರು ತಮ್ಮ ಪ್ರಾಣದ ಹಂಗು ಬಿಟ್ಟು ಆರೋಪಿಯೊಬ್ಬನನ್ನು ಬದುಕಿಸಿದ್ದರು. ಆದರೆ ಅವನು ಮತ್ತೆ ಕಳ್ಳತನಕ್ಕೆ ಇಳಿದಿದ್ದಾನೆ. ಜೈಲು ಸೇರಿ ಬಿಡುಗಡೆಯಾದ ಬಳಿಕ ತನ್ನ ಕುಕೃತ್ಯಗಳನ್ನು ಬಿಡದ ಕಳ್ಳ ಮಾರಾಕಾಸ್ತ್ರ ತೋರಿಸಿ ವಸೂಲಿಗೆ ಯತ್ನಿಸಿದ್ದ. ಅವನಿಗೆ ಮತ್ತೊಬ್ಬ ಸಾಥ್ ನೀಡಿದ್ದ. ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಫೆಬ್ರವರಿ 20ರಂದು ಲಾಂಗ್ ಬೀಸಿ ಅಂಗಡಿಗಳಲ್ಲಿ ಸುಲಿಗೆಗೆ ಯತ್ನಿಸಿದ್ದ ಹಳೆ ಕಳ್ಳ ಮಜರ್ ಮತ್ತು ಸೈಯದ್ ಮಾಜ್ನನ್ನು ಕೆ.ಜೆ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದರೋಡೆಗೆ ಯತ್ನಿಸಿದ್ದ ವೈರಲ್ ವಿಡಿಯೋವನ್ನು ಆಧರಿಸಿ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. ತನಿಖೆ ವೇಳೆ ಮಜರ್ ಬಳಿ 25 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.
ಹಳೆ ಕಳ್ಳ ಮಜರ್ ಮತ್ತು ಸೈಯದ್ ಮಾಜ್ ಜೋಡಿ ದೊಡ್ಡ ತಲವಾರ್ ಹಿಡಿದು ಅಂಗಡಿಯಲ್ಲಿ ಹಣ ವಸೂಲಿಗೆ ಇಳಿದಿದ್ದರು. ಆರೋಪಿ ಮಜರ್ ಅಂಗಡಿಯೊಂದರಲ್ಲಿ ಲಾಂಗ್ ಬೀಸಿದ್ದ. ಕೆ ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 20 ರಂದು ಘಟನೆ ನಡೆದಿತ್ತು. ಆರೋಪಿ ವಸೂಲಿಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಸೂಲಿ ಯತ್ನದ ವಿಡಿಯೋವನ್ನ ಟ್ವಿಟರ್ ನಲ್ಲಿ ಷೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಸಹ ಮಾಡಲಾಗಿತ್ತು. ಕೂಡಲೇ ಆರೋಪಿಗಳ ಪತ್ತೆ ಹಚ್ಚುವಂತೆ ಹಿರಿಯ ಅಧಿಕಾರಿಗಳು ಪೊಲೀಸರಿಗೆ ಸೂಚಿಸಿದ್ದರು.
ಕೇಸ್ ದಾಖಲಿಸಿಕೊಂಡು, ಕಾರ್ಚಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗಳ ಮೇಲೆ ಎರಡು ಸುಲಿಗೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ತನಿಖೆಯ ವೇಳೆ ಆರೋಪಿ ಮಜರ್ ಬಳಿ 25 ಗ್ರಾಂ ಎಂಡಿಎಂಎ ಮಾದಕವಸ್ತು ಡ್ರಗ್ಸ್ ಸಹ ಪತ್ತೆಯಾಗಿದೆ. ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಏನಾಗಿತ್ತು ಅಂದರೆ…
ಸರಗಳ್ಳತನ ಕೇಸ್ ನಲ್ಲಿ ಮಜರ್ ಕಳೆದ ವರ್ಷ ಸಿಕ್ಕಿಬಿದಿದ್ದ. ತಮಿಳುನಾಡಿನಲ್ಲಿ ಎಸ್ಕೇಪ್ ಆಗಲು ಹೋಗಿ ಮಜರ್ ಬಾವಿಗೆ ಬಿದಿದ್ದ. ಆ ವೇಳೆ ಪೇದೆಯೋರ್ವರು ಬಾವಿಗೆ ಹಾರಿ ಕಳ್ಳ ಮಜರ್ ನನ್ನು ರಕ್ಷಣೆ ಮಾಡಿದ್ದರು. ಯಲಹಂಕ ಪೇದೆ ತಮ್ಮ ಪ್ರಾಣದ ಹಂಗು ತೊರೆದು ಮಜರ್ ನನ್ನು ಬದುಕಿಸಿ ಕರೆತಂದಿದ್ದರು. ಬಳಿಕ ಸರಗಳ್ಳತನ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಇತ್ತೀಚೆಗೆ ರಿಲೀಸ್ ಆಗಿದ್ದ ಮಜರ್.
ಬಿಡುಗಡೆ ಬಳಿಕ ತಲ್ವಾರ್ ಹಿಡಿದು ಸುಲಿಗೆ ಯತ್ನಕ್ಕೆ ಇಳಿದಿದ್ದ. ಅಂಗಡಿಯೊಂದರಲ್ಲಿ ತಲ್ವಾರ್ ತೋರಿಸಿದ ದೃಶ್ಯ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋ ಆಧರಿಸಿ ತನಿಖೆ ವೇಳೆ ಹಳೆ ಕಳ್ಳ ಮಜರ್ ಸಿಕ್ಕಿಬಿದ್ದ!