ಕ್ರೈಂ ನ್ಯೂಸ್
ಪ್ರಾರ್ಥನಾ ಮಂದಿರ ಧ್ವಂಸ – ಇಬ್ಬರು ಆರೋಪಿಗಳಿಗೆ ಎರಡೇ ದಿನದಲ್ಲಿ ಜಾಮೀನು
ಮಂಗಳೂರು,: ಕೂಳೂರು ಸಮೀಪದ ಪಂಜಿನಮೊಗರು – ಉರುಂದಾಡಿ ಗುಡ್ಡೆಯಲ್ಲಿ ಪ್ರಾರ್ಥನಾ ಮಂದಿರ ದ್ವಂಸ ಪ್ರಕರಣದ ಆರೋಪದಲ್ಲಿ ಕಾವೂರು ಠಾಣಾ ಪೊಲೀಸರು ದಿನಾಂಕ 21-02-2022 ರಂದು ಆರೋಪಿಗಳಾದ ಬಜಪೆ ನಿವಾಸಿ ಲತೀಶ್ (25) , ಕಾವೂರು ಉರುಂದಾಡಿ ನಿವಾಸಿ ಧನಂಜಯ (36) ಬಂಧಿಸಿದ್ದರು.
ಆದರೆ ಬಂಧಿತರ ಜಾಮೀನು ಅರ್ಜಿ ಸ್ವೀಕರಿಸಿದ ಮಂಗಳೂರಿನ 3 ನೇ ಜೆ.ಎಮ್.ಎಫ್ ಸಿ ನ್ಯಾಯಾಲಯ ಮಂಗಳವಾರ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ , ಆರೋಪಿಗಳ ಪರವಾಗಿ ಮಂಗಳೂರಿನ ವಕೀಲರಾದ ಶ್ರೇಯಸ್.ಎಸ್.ಕೆ ,ಮತ್ತು ಹರ್ಷಿತ್ .ಎ.ಎಸ್ ಅವರು ವಾದಿಸಿದರು.