ಕ್ರೈಂ ನ್ಯೂಸ್

ಪೊಲೀಸ್ ಇನ್ಸ್‌ಪೆಕ್ಟರ್ ಕಾರಿನ ಗಾಜನ್ನೇ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದ ಖದೀಮರು

ಇನ್ಸ್‌ಪೆಕ್ಟರ್ ಅರುಣ್, ಕಾಂಗ್ರೆಸ್ ಕಚೇರಿ ಬಳಿ ಕಾರು ನಿಲ್ಲಿಸಿ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಕಳ್ಳರು ಕಾರಿನ ಹಿಂಬದಿ ಗಾಜು ಒಡೆದು ಕಾರಿನಲ್ಲಿದ್ದ 1 ಲ್ಯಾಪ್‌ಟಾಪ್, 3 ಪೆನ್‌ಡ್ರೈವ್, 50 ಸಾವಿರ ನಗದು ಕಳ್ಳತನ ಮಾಡಿದ್ದರು.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ(Thief) ಹಾವಳಿ ಹೆಚ್ಚಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಪೊಲೀಸ್ ಇನ್ಸ್‌ಪೆಕ್ಟರ್ನ(Police Inspector) ಕಾರಿನ ಗಾಜನ್ನೇ ಒಡೆದು ಖದೀಮರು ಕಳ್ಳತನ ಮಾಡಿದ್ದಾರೆ. ಬೆಂಗಳೂರಿನ ರೇಸ್‌ಕೋರ್ಟ್‌ ರಸ್ತೆ ಕಾಂಗ್ರೆಸ್ ಕಚೇರಿ ಬಳಿ ನಿಲ್ಲಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಕಾರಿನ ಗಾಜು ಒಡೆದು ಖದೀಮರು ಕಳ್ಳತನ(Theft) ಮಾಡಿದ್ದಾರೆ. ಕಾರಿನಲ್ಲಿದ್ದ 1 ಲ್ಯಾಪ್‌ಟಾಪ್, 3 ಪೆನ್‌ಡ್ರೈವ್, 50 ಸಾವಿರ ನಗದು ಕಳವಾಗಿದೆ.

ಇನ್ಸ್‌ಪೆಕ್ಟರ್ ಅರುಣ್, ಕಾಂಗ್ರೆಸ್ ಕಚೇರಿ ಬಳಿ ಕಾರು ನಿಲ್ಲಿಸಿ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಕಳ್ಳರು ಕಾರಿನ ಹಿಂಬದಿ ಗಾಜು ಒಡೆದು ಕಾರಿನಲ್ಲಿದ್ದ 1 ಲ್ಯಾಪ್‌ಟಾಪ್, 3 ಪೆನ್‌ಡ್ರೈವ್, 50 ಸಾವಿರ ನಗದು ಕಳ್ಳತನ ಮಾಡಿದ್ದರು. ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಶುರು ಮಾಡಿದ್ದಾರೆ.

ಕಾರಿಗೆ ಸೈಡ್ ಕೊಡದಿದ್ದಕ್ಕೆ ಬಿತ್ತು ಲಾಠಿ ಏಟು
ಇನ್ನು ಮತ್ತೊಂದೆಡೆ ಕಾರಿಗೆ ಸೈಡ್ ಕೊಡದಿದ್ದಕ್ಕೆ ಲಾಠಿ ಏಟು ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಘಟನೆ ನಡೆದಿದೆ. ಕಾರಿಗೆ ಸೈಡ್ ಕೊಡದಿದ್ದಕ್ಕೆ ಯುವಕ ಅಕ್ಟೀವಾ ಅಡ್ಡಗಟ್ಟಿ ಹಲ್ಲೆ ನಡೆಸಿ ಕೈಯಿಂದ ಪಂಚ್ ಕೊಟ್ಟಿದ್ದಾನೆ. ಅಣ್ಣ ಹೊಡಿಬೇಡ. ಸುಮ್ಮನೆ ಇರಣ್ಣ ಅಂದ್ರೂ ಬಿಡದ ಯುವಕ ದ್ವಿ ಚಕ್ರ ವಾಹನ ಸವಾರರನ್ನು ಥಳಿಸಿದ್ದಾನೆ. ನೆಲಮಂಗಲದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ವರೆಗೆ ನಾಲ್ಕು ಗಂಭೀರ ಹಲ್ಲೆ ಪ್ರಕರಣ ನಡೆದ್ರೂ ಪೊಲೀಸರು ಆರೋಪಿಗಳನ್ನ ಬಂಧಿಸಿಲ್ಲ.

ಮನೆ ಕಳ್ಳತನ ಮಾಡುತ್ತಿದ್ದ ಕಳ್ಳಿ ಅರೆಸ್ಟ್
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕೈಚಳಕ ತೋರುತ್ತಿದ್ದ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತಳಿಂದ 4 ಲಕ್ಷ ಮೌಲ್ಯದ 105 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿತ ಮಹಿಳೆ ಕಳೆದ ನಾಲ್ಕು ತಿಂಗಳಿಂದ ಅನ್ನಪೂರ್ಣೇಶ್ವರಿ ನಗರದಲ್ಲಿ ‌ಮನೆಕೆಲಸ ಮಾಡುತ್ತಿದ್ದಳು. ಇನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 4.50 ಲಕ್ಷ ಮೌಲ್ಯದ ಚಿನ್ನಾಭರಣ 2 ಬೈಕ್ ವಶಕ್ಕೆ ಪಡೆಯಲಾಗಿದೆ. ಒಂಟಿ ಮನೆಗಳನ್ನ ಟಾರ್ಗೆಟ್ ಮಾಡಿ ಕೈಚಳಕ ತೋರುತ್ತಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಜ್ಞಾನಭಾರತಿ ಠಾಣೆ ಪೊಲೀಸರು ಬೀಟ್​ನಲ್ಲಿದ್ದ ಹೊಯ್ಸಳ ಸಿಬ್ಬಂದಿಯಿಂದ ಗಾಂಜಾ ಸೀಜ್ ಮಾಡಲಾಗಿದೆ. 7 ಕೆಜಿ 50 ಗ್ರಾಂ ಗಾಂಜಾ ಸಮೇತ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಗಾಂಜಾ ಮಾರಾಟಕ್ಕೆ ಯತ್ನಿಸೋ ವೇಳೆ ಬೀಟ್ ಪೊಲೀಸರಿಗೆ ಆರೋಪಿಗಳು ಲಾಕ್ ಆಗಿದ್ದಾರೆ. ಹೊರ ರಾಜ್ಯದ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಗಾಂಜಾ ಮಾರಾಟ ಮಾಡಲು ಆರೋಪಿಗಳು ಯತ್ನಿಸ್ತಿದ್ದರು ಎಂದು ತಿಳಿಸು ಬಂದಿದೆ. ಇನ್ನು ಮಾಗಡಿ ರಸ್ತೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕವಸ್ತು ಗಾಂಜಾ ಹಾಗೂ ಗಾಂಜಾ ಎಣ್ಣೆ ಮಾರಾಟ ಮಾಡಲು ಯತ್ನಿಸ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಗಸ್ತಿನಲ್ಲಿದ್ದ ಹೊಯ್ಸಳ ಬೀಟ್ ಸಿಬ್ಬಂದಿಯಿಂದ ಆರೋಪಿ ಬಂಧನವಾಗಿದೆ. ಬಂಧಿತನಿಂದ 4 ಕೆಜಿ ಗಾಂಜಾ ಹಾಗೂ 375 ಗ್ರಾಂ ಗಾಂಜಾ ಎಣ್ಣೆ ವಶಕ್ಕೆ ಪಡೆಯಲಾಗಿದೆ.

ರೌಡಿಶೀಟರ್ ಬೇಕರಿ ರಘು ಬಂಧನ
ಬೆಂಗಳೂರು: ಗೂಂಡಾಕಾಯ್ದೆ ಅಡಿ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿಯ ಸಹಚರ, ರೌಡಿಶೀಟರ್ ಬೇಕರಿ ರಘು ಬಂಧಿಸಲಾಗಿದೆ. ದಕ್ಷಿಣ ವಿಭಾಗದ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ನಗರದ 17 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೊಲೆ, ಕೊಲೆಯತ್ನ, ಧಮ್ಕಿ, ದರೋಡೆ, ಡಕಾಯಿತಿ, ಮಾರಣಾಂತಿಕ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button