ಅರ್ಜಿ ಆಹ್ವಾನಕ್ಕೆ ಮಾತ್ರ ಸೀಮಿತವಾಗುತ್ತಿದೆಯಾ ಅಂಬೇಡ್ಕರ್ ನಿಗಮದ ಯೋಜನೆಗಳು..?
ಮಂಗಳೂರು: ಅಂಬೇಡ್ಕರ್ ನಿಗಮದಲ್ಲಿ ವರ್ಷಕ್ಕೆ ಒಂದು ಬಾರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿ ಸೂಕ್ತ ಪಲಾನುಭವಿಗಳಿಗೆ ನೀಡುವುದು ಕ್ರಮ. ಅದರೆ ಕಳೆದ ವರ್ಷ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಯಾವುದೇ ರೀತಿಯ ಅನುದಾನ ದೊರಕುತ್ತಿಲ್ಲ ಎನ್ನುವುದು ವಿರ್ಪಯಾಸವಾದರು ಸತ್ಯಸಂಗತಿ.
ಅನುದಾನ ಬಿಡುಗಡೆ ಯಾಕೆ ಆಗಿಲ್ಲ.!!
ಅನುದಾನ ಬಿಡುಗಡೆ ಯಾಕೆ ಆಗುತ್ತಿಲ್ಲ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನಿಡುತ್ತಿಲ್ಲ. ಒಂದು ತಿಂಗಳಿನಲ್ಲಿ ಅನುದಾನ ಬರುತ್ತೆ ಎನ್ನುವ ಮಾತು ಅಂಬೇಡ್ಕರ್ ನಿಗಮದ ಅಧಿಕಾರಿಗಳದ್ದು.
ಈ ವರ್ಷ ಮತ್ತೆ ಅರ್ಜಿ ಕರೆದ್ದಾದರೂ ಯಾಕೆ..?
ಕಳೆದ ವರ್ಷದ ಅನುದಾನ ಬಂದಿಲ್ಲ ಎಂದಾದರೆ ಮತ್ತೆ ಈ ಬಾರಿ ಅರ್ಜಿ ಆಹ್ವಾನಿಸುವ ಪ್ರಮೇಯವಾದರು ಯಾತಕ್ಕಾಗಿ ಬೇಕು ಎನ್ನುವುದು ಗಮನಿಸಬೇಕಾದ ಅಂಶ!!!
ಅಧಿಕಾರಿಗಳ ಜಾಣ ಮೌನ!
ಅಧಿಕಾರಿಗಳಲ್ಲಿ ವಿಚಾರಿಸಿದರೆ ಅನುದಾನ ಬಂದಿಲ್ಲ. ಎಂಬ ಉತ್ತರ ಸದಾ ಕೇಳಿ ಬರುತ್ತೆ. ಮತ್ತು ಅಸಡ್ಡೆಯ ಉತ್ತರಗಳು ಕೇಳಿ ಬರುತ್ತದೆ. ಜನಪ್ರತಿನಿಧಿಗಳ ಅಸಡ್ಡೆ ಅಧಿಕಾರಿಗಳ ಈ ರೀತಿಯ ಉತ್ತರಕ್ಕೆ ಕಾರಣವಾಗಿದೆ.
ಈ ಬಗ್ಗೆ ಜನಪ್ರತಿನಿಧಿಗಳು ಅದಷ್ಟು ಬೇಗ ಎಚ್ಚೆತ್ತು ನಿಗಮದ ಯೋಜನೆಗಳನ್ನು ಜಾಹಿರಾತುವಿಗೆ ಸೀಮಿತಗೊಳಿಸದೇ ಯೋಜನೆಗಳನ್ನು ಕಾರ್ಯಗತ ಮಾಡಿ ತೋರಿಸುವುದು ಒಳಿತು..