ಪಿವಿ ವಿಶೇಷ

ಶ್ರೀ ಮಹದೇಶ್ವರ ಶಾಲೆಯ ವಿದ್ಯಾರ್ಥಿಗಳು : ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣ

ಶಾರುಕ್ ಖಾನ್ ಹನೂರು

ಹನೂರು : ಮಲೆ ಮಹದೇಶ್ವರ ಬೆಟ್ಟ ಶ್ರೀ ಮಲೆ ಮಹದೇಶ್ವರ ಕೃಪಾ ವಿದ್ಯಾ ಸಂಸ್ಥೆ (ರಿ) ಇವರ ವತಿಯಿಂದ ನಡೆಯುತ್ತಿರುವ ಕಣ್ಣೂರು ಗ್ರಾಮದ ಶ್ರೀ ಮಹದೇಶ್ವರ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಹದೇವ ಪ್ರಸಾದ್ ಎಸ್, ಮತ್ತು ನಿಸರ್ಗ ಎಂಬ ಇಬ್ಬರು ವಿದ್ಯಾರ್ಥಿಗಳು ನವೋದಯ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಶಾಲೆಯ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.ತಾಲೂಕಿನ ಕಣ್ಣೂರು ಗ್ರಾಮದ ಸಿದ್ದಪ್ಪ , ರವರ ಮಗ ಮಹದೇವ ಪ್ರಸಾದ್ ಎಸ್. ಹಾಗೂ ಚೆನ್ನಲಿಂಗನಹಳ್ಳಿ ಗ್ರಾಮದ ಮಲ್ಲೇಶ್ ರವರ ಮಗಳು ನಿಸರ್ಗ ಇಬ್ಬರು ವಿದ್ಯಾರ್ಥಿಗಳು 2022ನೇ 23ನೇ ಸಾಲಿನ ಐದನೇ ತರಗತಿ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ 6ನೇ ತರಗತಿಗೆ ಸೇರಲು ನವೋದಯ ಶಾಲೆ ಪ್ರವೇಶಕ್ಕೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಕಣ್ಣೂರು ಶ್ರೀ ಮಹದೇಶ್ವರ ಹಿರಿಯ ಪ್ರಾಥಮಿಕ ಪಾಠಶಾಲೆ ನಮ್ಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಸ್.ಮಹದೇವ ಪ್ರಸಾದ್ ಮತ್ತು ನಿಸರ್ಗ ಎಂಬ ವಿದ್ಯಾರ್ಥಿಗಳು ನವೋದಯ ಶಾಲೆ ಚಾಮರಾಜನಗರದಲ್ಲಿ ನಡೆದ ಆರನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದಂತಹ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.ಶ್ರೀ ಮಹದೇಶ್ವರ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಪ್ರವೇಶಕ್ಕೆ ಆಯ್ಕೆ ಆಗಿರುವುದು ಹೆಮ್ಮೆಯ ವಿಷಯ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮವಾಗಿ ಬೆಳೆಯಲಿ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹದೇವ ಪ್ರಭು, ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರಗಳು ಪೋಷಕರು ಹಾರೈಸಿ ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button