ಶಿವಪಾರ್ವತಿ ಕಂಡಾಯ ಮೆರವಣಿಗೆ ಉತ್ಸವ ಹಬ್ಬ ಆಚರಣೆ
ವರದಿ ಶಾರುಕ್ ಖಾನ್ ಹನೂರು
ಕೊಳ್ಳೇಗಾಲ : ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ಮೂರು ತಲೆ ಮಾರಿನಿಂದ ಪ್ರತಿ ವರ್ಷ ಆಚರಣೆ ಮಾಡುತ್ತ ಬಂದಿರುವ ಶಿವ ಪಾರ್ವತಿ ಕಂಡಾಯ ಮೆರವಣಿಗೆ ಉತ್ಸವ ಹಬ್ಬ ಆಚರಣೆ ನಡೆಯಿತು. ಸುಮಾರು ಮೂರು ವರ್ಷ ಕೊರೋನ ಕಾರಣದಿಂದ ಸ್ಥಗಿತವಾಗಿದ್ದ ಹಬ್ಬ ಶುಕ್ರವಾರ ನಡೆಯಿತು ಹಬ್ಬದ ವಿಶೇಷತೆ ಸುತ್ತ ಮುತ್ತಲ ಗ್ರಾಮದ ದೇವರ ಗುಡ್ಡರುಗಳು ಈ ಹಬ್ಬ ದಿನ ನಿಗದಿ ಹಾಗುವ ಮುನ್ನ ಒಂದೆರಡು ತಿಂಗಳು ಮುಂಚೆಯೇ ಆಂಧ್ರ ಪ್ರದೇಶದ ಶ್ರೀಶೈಲಕ್ಕೆ ತೆರಳಿ ಶಿವ ಪಾರ್ವತಿಗೆ ಅಲ್ಲಿ ಪೂಜೆ ಪುರಸ್ಕಾರ ಸಲ್ಲಿಸಿ ಅಲ್ಲಿಂದ ತಮ್ಮ ಗ್ರಾಮಕ್ಕೆ ತೆರಳಿ ಒಂದು ದಿನಾಂಕ ನಿಗದಿ ಮಾಡಿ ಶಿವ ಪಾರ್ವತಿ ಕಂಡಾಯ ಮೆರವಣಿಗೆ ಹಬ್ಬ ಆಚರಣೆ ಮಾಡುತ್ತಾರೆ. ಕೊಂಗರಹಳ್ಳಿ ಗ್ರಾಮದ ಎರಡು ಮೂರು ಬಡಾವಣೆಗಳಲ್ಲಿ ಪ್ರತಿ ಮನೆಯ ಬಾಗಿಲಿಗೆ ಕಂಡಾಯ ಹೊತ್ತ ದೇವರ ಗುಡ್ಡರು ತೇರಳುತ್ತಾರೆ ಗ್ರಾಮಸ್ಥರು ತಂಪು ಮತ್ತು ಹೂವು ಹಿಡುಗಾಯಿ ತಂದು ಪೂಜೆ ಸಲ್ಲಿಸುತ್ತಾರೆ.ಗ್ರಾಮದ ಯಜಮಾನರು ಯುವಕರು ಮಹಿಳೆಯರು ಹಿರಿಯರೆಲ್ಲ ಸೇರಿ ಆಚರಿಸುತ್ತಾರೆ. ಅಕ್ಕ ಪಕ್ಕದ ಗ್ರಾಮದಿಂದ ಹಿರಿಯ ದೇವರ ಗುಡ್ಡರುಗಳು ಆಚರಣೆ ಮುಗಿದು ಕಂಡಾಯ ಕೆಳಗೆ ಇರಿಸುವ ತನಕ ಗ್ರಾಮಸ್ಥರ ಜೊತೆ ಆಚರಣೆಯಲ್ಲಿ ಪಾಲ್ಗೊಂಡು ನಂತರ ಉಪಹಾರ ಸೇವಿಸುತ್ತಾರೆ. ವೀರ ಮಲ್ಲಯ್ಯ ಮಂಗಲ ಮಲ್ಲು ಸಿಂಗನಲ್ಲೂರ್ ಚಿಕ್ಕಮದಯ ಕಾಮಗೆರೆ ಮಲ್ಯಯ ಇಂದೋಡಿ ಮಲ್ಲಯ್ಯ. ಯಜಮಾನ್ರು ಮಹೇಶ್. ಪುಟ್ಟಣ್ಣ. ಮಹೇಶ್.ಗ್ರಾಮ ಪಂಚಾಯತ್ ಸದಸ್ಯ ಮಹೇಶ್. ಕೃಷ್ಣ. ಗ್ರಾಮದ ಯುವಕರು ಮತ್ತಿತರರು ಇದ್ದರು.