ನಾಲ್ಕು ತಿಂಗಳಿಂದ ವೇತನ ಸಿಗದೇ 108 ನೌಕರರ ಪರದಾಟ
ವರದಿ ಶಾರುಕ್ ಖಾನ್ ಹನೂರು
ಚಾಮರಾಜನಗರ : ಹಗಲಿರುಳೆನ್ನದೆದಿನದ 24 ಗಂಟೆ ತುರ್ತು ಆರೋಗ್ಯ ಸೇವೆ ನೀಡುವ ಆರೋಗ್ಯ ಕವಚ (108) ನೌಕರರಿಗೆ ನಾಲ್ಕು ತಿಂಗಳಿಂದ ವೇತನ ಸಿಗದೆ ಪರದಾಡುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಉಪನಿರ್ದೇಶಕರಿಗೆ ‘ಕರ್ನಾಟಕ ರಾಜ್ಯ ಆರೋಗ್ಯ ಕವಚ ನೌಕರರ ಸಂಘ’ದಿಂದ ಇತ್ತಿಚೆಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಹೊಟ್ಟೆಪಾಡಿಗೆ ದುಡಿಯುತ್ತಿರುವ ನಮಗೆ ಸಕಾಲದಲ್ಲಿ ವೇತನ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ನೌಕರ ಸಿಬ್ಬಂದಿಗಳಿದ್ದು ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ, ಜೀವನ ನಿರ್ವಹಣೆಯೇ ಕಷ್ಟವಾಗಿದೆ. ‘ಆರೋಗ್ಯ ಕವಚ’ದ ಹೊಣೆ ಹೊತ್ತಿರುವ ‘ಜಿವಿಕೆ’ ಸಂಸ್ಥೆ ನಮಗೆ ವೇತನ ನೀಡುವ ಜವಾಬ್ದಾರಿಯನ್ನು ಹೊತ್ತಿರುತ್ತದೆ. ನಮ್ಮ ವೇತನದ ಬಗ್ಗೆ ಜಿ.ವಿ.ಕೆ ಸಂಸ್ಥೆ ಮುಖ್ಯಸ್ಥರನ್ನು ಕೇಳಿದರೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನು ಹಣ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ನಮಗೆ ಸಿಗಬೇಕಾದ ವೇತನ ಮತ್ತು ಸೌಲಭ್ಯಗಳನ್ನು ಆರೋಗ್ಯ ಇಲಾಖೆ ತಡೆ ಹಿಡಿಯುತ್ತಿದೆ. ಎಂಬ ಮಾತು ಕೇಳಿ ಬರುತ್ತೀದೆ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತಾಗಿದೆ (108) ನೌಕರರ ಪರಿಸ್ಥಿತಿ ಬಲು ಕಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ವಿಚಾರವಾಗಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ನಿರ್ದೇಶಕರು ಹಾಗೂ ಜಿ ವಿ ಕೆ ಸಂಸ್ಥೆಯ ಮುಖ್ಯ ಅಧಿಕಾರಿಗಳು ಅರೋಗ್ಯ ಕವಚ (108) ನೌಕರ ಸಿಬ್ಬಂದಿಗಳಿಗೆ ಆಗಬೇಕಿರುವ ನಾಲ್ಕು ತಿಂಗಳ ವೇತನವನ್ನು ಕೂಡಲೇ ಜಾರಿ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ನೌಕರರಿಗೆ ಶೀಘ್ರದಲ್ಲಿ ವೇತನ ಆಗದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.