ಪಿವಿ ವಿಶೇಷ

ಬಕ್ರೀದ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಮೂಹಿಕ ಪ್ರಾರ್ಥನೆ

ಶಾರುಕ್ ಖಾನ್ ಹನೂರು

ಹನೂರು : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್-ಅಲ್-ಅಧ಼್ (ಬಕ್ರೀದ್) ಹಬ್ಬವನ್ನು ವಿಶ್ವಧ್ಯಾಂತ ಸಡಗರದಿಂದ ಆಚರಿಸಲಾಗುತ್ತಿದೆ.

ತಾಲೂಕಿನ ಚಿಗತ್ತಾಪುರ ಗ್ರಾಮಸ್ಥರು ಹಾಗೂ ಎಲ್ಲೇಮಾಳದ ಗ್ರಾಮಸ್ಥರು ಚಿಗತ್ತಾಪುರದ ಜಾಮೀಯ ಮಸ್ಜಿದ್ ಬಳಿಯಿಂದ ಜಮವಣೆಗೊಂಡು ಮೆರವಣಿಗೆದೊಂದಗೆ ಈದ್ಗಾ ಮೈದಾನಾಕ್ಕೆ ತೆರಳಿ ಸಮೂಹಿಕ ಪ್ರಾರ್ಥನೆ ಗೈದು ಪ್ರವಚನ ಮಾಡಿದ ಅವರು ಇಸ್ಲಾಮಿಕ್ ಅಥವಾ ಚಂದ್ರನ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಜುಲ್ ಹಿಜ್ಜಾ/ದುಲ್ ಅಲ್-ಹಿಜ್ಜಾ ತಿಂಗಳಲ್ಲಿ ಈ ಹಬ್ಬವನ್ನ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರವಾದಿ ಇಬ್ರಾಹಿಂ ಅಲ್ಲಾಹನಿಗೆ ತನ್ನದೆಲ್ಲವನ್ನ ಸಮರ್ಪಣೆ ಮಾಡಿಕೊಂಡಿದ್ದರು ಎನ್ನುವ ನಂಬಿಕೆ ಇದೆ. ಈ ದಿನ, ಈದ್ಗಾಗಳಲ್ಲಿ ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಝ್ ಅರ್ಪಿಸುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ.

ಈ ಸಂತೋಷದ ಸಂದರ್ಭಗಳಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಇಸ್ಲಾಂನಲ್ಲಿ ಹೇಳಲಾಗಿದೆ.ದುಲ್ ಅಜ್-ಹಿಜ್ಜಾದ ಹತ್ತನೇ ದಿನದಂದು, ಪ್ರಪಂಚದಾದ್ಯಂತದ ಮುಸ್ಲಿಮರು ಈದ್-ಉಲ್-ಅಧಾವನ್ನು ಒಂದು ಪ್ರಾಣಿಯನ್ನು .ಸಾಮಾನ್ಯವಾಗಿ ಕುರಿ, ಮೇಕೆಯನ್ನ ದೇವರಿಗೆ ಸ್ಮರಣಾರ್ಥ ಬಲಿ ಕೊಡುವ ಮೂಲಕ ಆಚರಿಸಲಾಗುತ್ತದೆ.

ಈ ಹಬ್ಬವನ್ನ ಪ್ರಪಂಚದಾದ್ಯಂತ ವಿವಿಧ ಸಮಯದಲ್ಲಿ ಆಚರಿಸಲಾಗುತ್ತದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ನಮಾಜ್ ಸಮಯದ ವಿಭಿನ್ನವಾಗಿದೆ. ಬಕ್ರೀದ್‌ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದ್ದು, ಇದು ಇಬ್ರಾಹಿಂನ ತ್ಯಾಗವನ್ನು ಮತ್ತು ಭಕ್ತರ ಮೇಲೆ ಅಲ್ಲಾಹುವಿಗಿದ್ದ ಭಕ್ತಿಯನ್ನು ನೆನೆಯುವ ದಿನವಾಗಿದೆ ಎಂದು ಹೇಳಲಾಗಿದೆ

Related Articles

Leave a Reply

Your email address will not be published. Required fields are marked *

Back to top button