ಪಿವಿ ವಿಶೇಷ

24 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ದೈಹಿಕ ಶಿಕ್ಷಕ: ನೋವಿನ ಮನಸ್ಸಿಂದ ಸ್ಥಳೀಯರ ಬೀಳ್ಕೊಡುಗೆ

ವರದಿ ಶಾರುಕ್ ಖಾನ್ ಹನೂರು

ಹನೂರು : ತಾಲೂಕಿನ ಪಳನಿಮೇಡು ಗ್ರಾಮದ ನಿವಾಸಿಯಾದ ದೈಹಿಕ ಶಿಕ್ಷಕ ಮುರುಗೇಶ್ 1999 ನೇ ಇಸವಿಯಿಂದ ಇಂದಿನತನಕ ಪೊನ್ನಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಇದೀಗ ಅವರನ್ನು ಹನೂರು ತಾಲೂಕಿನ ಮಿಣ್ಯo ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿದ್ದಾರೆ.ಸ್ಥಳೀಯ ಸುತ್ತ ಮುತ್ತಲ ಗ್ರಾಮದ ಹಿರಿಯರು ಪೋಷಕರು ವಿದ್ಯಾರ್ಥಿಗಳು ಹಳೇ ವಿದ್ಯಾರ್ಥಿಗಳು ವಲ್ಲದ ಮನಸ್ಸಿನಿಂದ ತಮಿಳುನಾಡು ಬೆಂಗಳೂರು ಸುತ್ತಮುತ್ತ ವ್ಯಾಸಂಗ ಮತ್ತು ಕೆಲಸದಲ್ಲಿ ತೊಡಗಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ದೈಹಿಕ ಶಿಕ್ಷಕ ಮುರುಗೇಶ್ ರವರಿಗೆ ವಿಶೇಷವಾದ ಹುಡುಗೋರೆಗಳನ್ನ ನೀಡಿ ಭಾವನಾತ್ಮಕದಿಂದ ಬೀಳ್ಕೊಡುಗೆ ನೀಡಿದ್ದಾರೆ. ಅಪರೂಪದ ವ್ಯಕ್ತಿತ್ವ ದೈಹಿಕ ಶಿಕ್ಷಕ ಮುರುಗೇಶ್ : ಶಿಕ್ಷಕ ವೃತ್ತಿಗೂ ಮೊದಲು ಒಂದು ವರ್ಷ ಪೊಲೀಸ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಂತರ ಶಿಕ್ಷಕರಾಗಿ ಸತತವಾಗಿ ಒಂದೇ ಶಾಲೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು ಶ್ರೀ ಮಲೆ ಮಾದೇಶ್ವರ ಅರಣ್ಯ ವಲಯದ ಕಾಡಂಚಿನ ಗ್ರಾಮವಾದ ಪೊನ್ನಾಚಿಯಲ್ಲಿ ಇವರು ವೃತ್ತಿಗೆ ಸೇರಿದ ದಿನದಿಂದ ಸುಮಾರು ಹತ್ತು ವರ್ಷಗಳ ಕಾಲ ಶಾಲೆಯಲ್ಲಿ ಇದ್ದುಕೊಂಡೆ ತಾವೇ ಅಡುಗೆ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಿದ್ದಾರೆ ಕಾಡಂಚಿನ ಗ್ರಾಮದಲ್ಲಿ ಆನೆ ಹಾವಳಿ ನಡುವೆ ವಿದ್ಯುತ್ ಇಲ್ಲದಿದ್ದರೂ ಇವರ ಸೇವೆ ನಿಜಕ್ಕೂ ಮೆಚ್ಚುವಂತದ್ದು.ಸಾಧನೆಗೈದ ಶಿಕ್ಷಕನಿಗೆ ವಿಶೇಷ ಶಿಕ್ಷಕ ಪ್ರಶಸ್ತಿ ದೊರೆಯಲಿ : ಪೊನ್ನಚಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು 24 ವರ್ಷ ಸೇವೆ ಸಲ್ಲಿಸಿರುವ ಮುರುಗೇಶ್ ದೈಹಿಕ ಶಿಕ್ಷಕನಿಗೆ ಸುತ್ತ ಮುತ್ತ ಗ್ರಾಮದ ಹಳೆ ವಿದ್ಯಾರ್ಥಿಗಳು ಹಾಗೂ ಹಿರಿಯ ಮುಖಂಡರು ಗ್ರಾಮಸ್ಥರು ವಿಶೇಷ ಶಿಕ್ಷಕ ಪ್ರಶಸ್ತಿ ಸಿಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಂತಹ ತುಂಬಾ ಒಳ್ಳೆಯ ಶಿಕ್ಷಕರನ್ನು ಪಡೆದ ನಾವು ತುಂಬಾ ಅದೃಷ್ಟವಂತರು ನಮ್ಮ ಕಾಡಂಚಿನ ಗ್ರಾಮ ಅರಣ್ಯ ವಲಯದಿಂದ ಕೂಡಿದ್ದು ಹಲವಾರು ಸಮಸ್ಯೆಗಳನ್ನು ಎದುರಿಸಿ ನಮಗೆ ಜ್ಞಾನರ್ಜನೆ ಮಾಡಿದ್ದಾರೆ ಕೇವಲ ದೈಹಿಕ ಶಿಕ್ಷಕರಲ್ಲದೆ ಇತರ ವಿಷಯಗಳಲ್ಲೂ ನಮಗೆ ಪಾಠ ಬೋದಿಸಿ ತುಂಬಾ ಆತ್ಮೀಯವಾಗಿ ನಮ್ಮ ಕುಟುಂಬ ಸದಸ್ಯರಂತೆ ಜೊತೆ ಇದ್ದರು. ಹಾಗೂ ಮುರುಗೇಶ್ ರವರು ಸೇವೆಗೆ ಸೇರಿದ ಸಂದರ್ಭದಲ್ಲಿ ಅವರಿಗೆ ಉಸಿರಾಟದ ಸಮಸ್ಯೆ ಇತ್ತು ಅದನ್ನು ಅರಿತ ನಾವು ಬೇರೆಡೆಗೆ ವರ್ಗಾವಣೆ ಮಾಡಿಕೊಳ್ಳುವoತೆ ಮನವಿ ಮಾಡಿದೆವು ಆದರೇ ಅವರು ನನ್ನ ಮೊದಲ ಶಾಲೆ ಇದು ಎಷ್ಟೇ ಕಷ್ಟ ಬಂದರೂ ಪೊನ್ನಚಿ ಶಾಲೆಯಲ್ಲೇ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಇಂತಹ ಶಿಕ್ಷಕರು ಸಿಗುವುದು ತುಂಬಾ ಕಡಿಮೆ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಅವರಿಗೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಉತ್ತಮ ವಿಶೇಷ ಶಿಕ್ಷಕ ಪ್ರಶಸ್ತಿ ನೀಡಬೇಕೆಂದು ಸ್ಥಳೀಯ ಗ್ರಾಮದ ನಿವಾಸಿಗಳು ಹಳೆ ವಿದ್ಯಾರ್ಥಿಗಳಾದ ಸ್ನೇಹಜೀವಿ ರಾಜು ತಮ್ಮ ಎಲ್ಲಾ ಸ್ನೇಹ ಬಳಗ ಜಿಲ್ಲಾ ಮತ್ತು ರಾಜ್ಯ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button