ಪಿವಿ ವಿಶೇಷ

ಜೆ,ಡಿ,ಎಸ್ ಹಾಗೂ ಕಾಂಗ್ರೆಸ್ ಬಿರುಸಿನ ಪ್ರಚಾರ ಬಿ,ಜೆ,ಪಿ ಗೆ ಸಂಕಷ್ಟ ?

ಶಾರುಕ್ ಖಾನ್ ಹನೂರು

ಹನೂರು : ವಿಧಾನಸಭಾ ಕ್ಷೇತ್ರದಲ್ಲಿ ಜೆ,ಡಿ,ಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು ಎರಡು ಪಕ್ಷದ ಅಭ್ಯರ್ಥಿಗಳು ಚುನಾವಣಾ ದಿನಾಂಖಕ್ಕೆ ಕೆಲವೇ ದಿನಗಳು ಇರುವುದರಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ ಬಿ,ಜೆ,ಪಿ ಪಕ್ಷದ ಅಭ್ಯರ್ಥಿಗಳನ್ನು ಕರ್ನಾಟಕ ರಾಜ್ಯಾದಂತ ಒಂದು ಪಟ್ಟಿಯನ್ನು ಬಿಡುಗಡೆ ಮಾಡದೇ ಇರುವುದು ಒಂದು ರೀತಿ ಹನೂರು ವಿಧಾನಸಭಾ ಕ್ಷೇತ್ರದ ಜೆ,ಡಿ,ಎಸ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಖುಷಿಯನ್ನುoಟು ಮಾಡಿದೆ. ಸತತವಾಗಿ ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ಕಾಂಗ್ರೆಸ್ ಅಭ್ಯರ್ಥಿ ಆರ್ ನರೇಂದ್ರ ರವರು 15 ವರ್ಷದ ಆಡಳಿತದಲ್ಲಿ ಜನ ಬೆಂಬಲಗಳಿಸಿದ್ದಾರೆ ಈ ಬಾರಿಯು ಕೂಡ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಅದೇ ರೀತಿ ಕಳೆದ ಬಾರಿ ಕಡಿಮೆ ಸಮಯದಲ್ಲಿ ಬಂದು ಎಮ್ ಆರ್ ಮಂಜುನಾಥ್ ರವರು ಜೆ,ಡಿ,ಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸುಮಾರು 47 ಸಾವಿರ ಮತಗಳನ್ನು ಪಡೆದು ಚರಿತ್ರೆ ಸೃಷ್ಟಿಸಿದ್ದರು ನಂತರ ಸುಮಾರು 5 ವರ್ಷಗಳಿಂದ ಕ್ಷೇತ್ರದಲ್ಲಿ ಉಳಿದು ಜನಸೇವೆ ಮಾಡುತ್ತ ಕ್ಷೇತ್ರದಲ್ಲಿ ಜನರ ಪ್ರೀತಿಗಳಿಸಿದ್ದಾರೆ ಇನ್ನು ಕ್ಷೇತ್ರದಲ್ಲಿ ಬಿ,ಜೆ,ಪಿ ಪಕ್ಷವನ್ನು ತೆಗೆದು ಕೊಂಡರೆ ಹನೂರಿನ ರಾಜಕೀಯ ಇತಿಹಾಸದಲ್ಲಿ ಬಿ,ಜೆ,ಪಿ ಲೆಕ್ಕಕ್ಕಿಲ್ಲದಂತಾಗಿದೆ ಯಾಕೆಂದರೆ ಹನೂರು ಕ್ಷೇತ್ರದಲ್ಲಿ ಒಮ್ಮೆಯೂ ಕೂಡ ಬಿ,ಜೆ,ಪಿ ಅಧಿಕಾರದ ಗದ್ದುಗೆ ಇಡಿದಿಲ್ಲ ಈ ಬಾರಿ ಬಿ,ಜೆ,ಪಿ ಪಕ್ಷದಿಂದ ಸುಮಾರು ಐದಕ್ಕೂ ಹೆಚ್ಚು ಅಭ್ಯರ್ಥಿಗಳು ಟಿಕೆಟ್ ರೇಸ್ನಲ್ಲಿದ್ದಾರೆ ಕಳೆದ ಬಾರಿ 54 ಸಾವಿರ ಮತಗಳನ್ನು ಪಡೆದ ದಿವಂಗತ ಎಚ್ ನಾಗಪ್ಪನವರ ಪುತ್ರ ಪ್ರೀತನ್ ನಾಗಪ್ಪ. ಈಭಾರಿ ಟಿಕೆಟ್ ಸಿಗುತ್ತದೆ ಎಂಬ ವಿಸ್ವಾಸದಲ್ಲಿದ್ದಾರೆ ಆಗೆಯೇ ಜನಧ್ವನಿ ಬಿ ವೆಂಕಟೇಶ್ ರವರು ಸುಮಾರು ಎರಡು ಮೂರು ವರ್ಷದಿಂದ ಕ್ಷೇತ್ರದಲ್ಲಿ ತಮ್ಮದೇ ಆದ ಸಾಮಾಜಿಕ ಸೇವೆಗಳನ್ನು ಮಾಡುತ್ತ ಜನಮನ್ನಣೆ ಗಳಿಸಿ ಹಿಂದುಳಿದ ವರ್ಗಗಳ ಕೋಟಾದಿಂದ ಟಿಕೆಟ್ ನನಗೆ ಕೊಡುತ್ತಾರೆ ಎಂಬ ವಿಸ್ವಾಸದಲ್ಲಿ ಇದ್ದಾರೆ . ಹಾಗೆಯೇ ಮಾನಸ ಫೌಂಡೇಶನ್ ದತ್ತೆಶ್ ಕುಮಾರ್ .ಯುವ ಮುಖಂಡ ನಿಶಾಂತ್.ಮಾಜಿ ಸಚಿವ ವಿ ಸೋಮಣ್ಣ. ಇವರೆಲ್ಲರೂ ಕೂಡ ಟಿಕೆಟ್ ಗಾಗಿ ಒಂದಲ್ಲ ಒಂದು ರೀತಿ ಕಷರತ್ತು ನಡೆಸುತ್ತ ಹನೂರು ವಿಧಾನಸಭಾ ಕ್ಷೇತ್ರದ ಬಿ,ಜೆ,ಪಿ ಟಿಕೆಟ್ ಪೈಪೋಟಿಯಲ್ಲಿದ್ದಾರೆ ಬಿ,ಜೆ,ಪಿ ಪಕ್ಷವು ಇನ್ನು ಕೂಡ ಟಿಕೆಟ್ ಘೋಷಣೆ ಮಾಡದಿರುವುದು ಮತದಾರರಲ್ಲಿ ಯಾರಿಗೆ ಟೆಕೆಟ್ ಸಿಗುತ್ತದೆ ಎಂಬ ಗೊಂದಲ ಉಂಟುಮಾಡಿದೆ ಕಾಂಗ್ರೆಸ್ ಜೆ,ಡಿ,ಎಸ್ ಪಕ್ಷವು ಈಗಾಗಲೇ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದೂ ಅಭ್ಯರ್ಥಿಗಳು ಮತಬೇಟೆಯಲ್ಲಿ ತೊಡಗಿದ್ದಾರೆ ಇನ್ನು ಬಿ,ಜೆ,ಪಿ ಪಕ್ಷದ ಐವರು ಅಭ್ಯರ್ಥಿಗಳು ಬಿಡುಗಡೆ ಗೊಳಿಸಲಿರುವ ಮೊದಲ ಪಟ್ಟಿಗಾಗಿ ಕಾದು ನೋಡುತ್ತಿದ್ದಾರೆ ಬಿ,ಜೆ,ಪಿ ಪಕ್ಷದ ಮೊದಲ ಪಟ್ಟಿ ಬಿಡುಗಡೆ ನಂತರವಷ್ಟೇ ಹನೂರು ಕ್ಷೇತ್ರದ ಸ್ಪಷ್ಟವಾದ ರಾಜಕೀಯ ಚಿತ್ರಣವನ್ನು ಕಾಣಬಹುದು.

Related Articles

Leave a Reply

Your email address will not be published. Required fields are marked *

Back to top button