ಡಾ ಬಾಬು ಜಗಜೀವನ್ ರಾಮ್ ದಿನಾಚರಣೆ.
ಶಾರುಕ್ ಖಾನ್ ಹನೂರು
ಹನೂರು : ಪಟ್ಟಣದ ಎಜೆ ಕಾಲೋನಿಯಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾಮ್ 116ನೇ ಜನ್ಮ ದಿನಚರಣೆ ಕಾರ್ಯಕ್ರಮ ಸರಳವಾಗಿ ಹಮ್ಮಿಕೊಳ್ಳಲಾಗಿತ್ತು. ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಬಾಬು ಜಗಜೀವನ್ ರಾಮ್ ರವರ ಸಂಘದ ಅಧ್ಯಕ್ಷರಾದ ಗುರುಸ್ವಾಮಿಯವರು ಪುಷ್ಪಾರ್ಚನೆ ನೆರವೇರಿಸಿ ನಂತರ ಮಾತನಾಡಿದವರು ಬಾಬು ಜಗಜೀವನ್ ರಾಮ್ ರವರು ಉಪ ಪ್ರಧಾನಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಸಿರು ಕ್ರಾಂತಿ ನೇಕರಾಗಿ ಭಾರತ ದೇಶದಲ್ಲಿ ಆಹಾರ ಉತ್ಪಾದನೆಗೆ ಹೆಚ್ಚಿನ ಹೊತ್ತು ನೀಡಿದರಿಂದ ನಮ್ಮ ಭಾರತ ದೇಶ ಆಹಾರ ಉತ್ಪಾದನೆಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಇರಬೇಕಾದರೆ ಅವರೇ ಕಾರಣಕರ್ತರಾಗಿದ್ದಾರೆ. ಮತ್ತು ಬಾಬು ಜಗಜೀವನ್ ರಾಮ್ ರವರು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ. ಸರ್ಕಾರದ ಸವಲತ್ತನ್ನು ಜನರಿಗೆ ಒದಗಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಎಂದು ತಿಳಿಸಿದರು. ಆದಿ ಜಾಂಬವ ಯುವ ಮುಖಂಡರಾದ ವೆಂಕಟೇಶ್ ಮಾತಾ ನಾಡಿ . ಪ್ರತಿಯೊಬ್ಬ ತಂದೆ ತಾಯಿಂದರು ಮಕ್ಕಳಿಗೆ ಶಿಕ್ಷಣ ಕೊಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು . ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ. ಬಾಬು ಜಗಜೀವನ್ ರಾಮ್ ರವರ ತತ್ವ ಸಿದ್ಧಾಂತಗಳನ್ನ ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುಂದೆ ಬರಬೇಕು ಮಕ್ಕಳು ಕುಡಿತ ಮೋಜು ಮತ್ತು ಧೂಮಪಾನ ಅಕ್ರಮ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಹೋಗದೆ ಶಿಕ್ಷಣದ ಕಡೆ ಗಮನಹರಿಸಿ ಎಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಬಾಬು ಜಗಜೀವನ್ ರಾಮ್ ಸಂಘದ ಕಾರ್ಯದರ್ಶಿಯಾದ ಗೋವಿಂದರಾಜ್. ಆದಿ ಜಾಂಬವ . ಯುವಕರುಗಳಾದ . ಸಂತೋಷ. ಅಮಿತ್. ಮಂಟ್ಯ. ಪಮ್ಮಿ. ರಮೇಶ. ಅರಸು. ಗವಿಸಿದ್ದ. ತಮ್ಮಡಿ ರಘು ಸಿದ್ದರಾಜು ಹಾಗೂ ಡಾಕ್ಟರ್ ಬಾಬು ಜಗಜೀವನ್ ರಾಮ್ ಕಲಾ ಸಂಘದ. ಪದಾಧಿಕಾರಿಗಳು ಹಾಜರಿದ್ದರು ಇನ್ನಿತರರು ಹಾಜರಿದ್ದರು