ಮಹದೇಶ್ವರ ಬೆಟ್ಟಕ್ಕೆ ಸುಸರ್ಜಿತ ಬಸ್ ನಿಲ್ದಾಣ ಅವಶ್ಯಕತೆ
ಶಾರುಕ್ ಖಾನ್ ಹನೂರು
ಹನೂರು : ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಮಂದಿ ಮಾದಪ್ಪನ ದರ್ಶನ ಪಡೆಯಲು ವರ್ಷಪೂರ್ತಿ ಬರುತ್ತಾರೆ ಆದರೆ ಇಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣದ ಇಲ್ಲದಿರುವುದು ಬೇಸರದ ಸಂಗತಿ ಆಗಿದೆ. ಮಾದಪ್ಪ ಕೋಟಿ ಒಡೆಯ ಪ್ರತಿ ತಿಂಗಳು ಅಮಾವಾಸ್ಯೆ ಹಾಗೂ ಶಿವರಾತ್ರಿ ಯುಗಾದಿ ಹಬ್ಬಗಳ ಸಂದರ್ಭದಲ್ಲಿ ಲಕ್ಷಾಂತರ ಮಂದಿ ದೇವರ ದರ್ಶನಕ್ಕೆ ಬರುವುದರಿಂದ ಇಲ್ಲಿ ಒಂದು ಸುಂದರ ಸುಸಜ್ಜಿತವಾದ ಬಸ್ ನಿಲ್ದಾಣದ ಅವಶ್ಯಕತೆ ಇದೆ. ರಾಜ್ಯದ ನಾನಾ ಭಾಗಗಳಿಗೆ ಇಲ್ಲಿಂದ ಬಸ್ಗಳು ಸಂಚರಿಸುತ್ತಿದ್ದು ಸಾವಿರಾರು ಭಕ್ತರು ಪ್ರಯಾಣಿಕರು, ವಿದ್ಯಾರ್ಥಿಗಳು ಜನಸಾಮಾನ್ಯರಿಗೆ ಈ ಬಸ್ ನಿಲ್ದಾಣವು ಆಶ್ರಯವಾಗಿದ್ದು, ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟ ಲಕ್ಷಾಂತರ ಭಕ್ತಾದಿಗಳನ್ನು ಗಮನ ಸೆಳೆಯುತ್ತಿದೆ..ವಿದ್ಯಾರ್ಥಿಗಳು ಜನಸಾಮಾನ್ಯರಿಗೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣವು ಪ್ರಮುಖ ಆಶ್ರಯವಾಗಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೂ ಸಂಚರಿಸುವ ಬಸ್ಗಳಿಗೆ ಈ ಬಸ್ ನಿಲ್ದಾಣ ಕೇಂದ್ರವಾಗುತ್ತಿದ್ದು, ಇಲ್ಲಿ ಹೆಚ್ಚಿನ ವ್ಯವಸ್ಥೆಗಳು ಇಲ್ಲದ ಕಾರಣ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ. ಬಸ್ ನಿಲ್ದಾಣದಲ್ಲಿ ಮೇಲ್ಚಾವಣಿ ಇಲ್ಲದೆ ಇರುವುದನ್ನು ಇಲ್ಲಿ ಕಾಣಬಹುದು. ಪ್ರಸಿದ್ಧಿ ಪಡೆದಿರುವ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಜನಸಂಖ್ಯೆ ಆಗಮಿಸುತ್ತಿದ್ದು ಮತ್ತು ಇನ್ನುಳಿದ ದಿನಗಳಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭಕ್ತಾದಿಗಳು ಭೇಟಿ ಕೊಡುತ್ತಾರೆ. ಬಸ್ ನಿಲ್ದಾಣದ ಹಿಂಭಾಗದಲ್ಲೇ ಮಲಮೂತ್ರ ವಿಸರ್ಜನೆ ಹೆಚ್ಚಾಗಿದ್ದು, ಸ್ವಚ್ಛತೆ ಇಲ್ಲದಿರುವುದು ಕಂಡುಬರುತ್ತದೆ.ಮುಂದಿನ ದಿನಗಳಲ್ಲಾದರೂ ನೂತನ ಬಸ್ ನಿಲ್ದಾಣ ವನ್ನು ಶೀಘ್ರದಲ್ಲಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.