ಪಿವಿ ವಿಶೇಷ
ಶಾಲೆ ಮಗ್ಗುಲಲ್ಲೇ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ದುರಸ್ತಿಗೆ ಮುಂದಾಗದ ಅಧಿಕಾರಿಗಳು
ಶಾರುಕ್ ಖಾನ್ ಹನೂರು
ಹನೂರು :ತಾಲ್ಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ದೇವಾಲಯ ಹಾಗು ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಮುಂಭಾಗ ನೀರಿನ ಪೈಪ್ ಹೊಡೆದು ನೀರು ಪೋಲಾಗುತ್ತಿದ್ದರು ಇಲ್ಲಿನ ಜನ ಪ್ರತಿನಿಧಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ಕಳೆದ 1 ತಿಂಗಳಿನಿಂದಲೂ ನೀರಿನ ಪೈಪ್ ಹೊಡೆದು ಚರಂಡಿಯಲ್ಲಿ ನೀರು ಪೋಲಾಗುತ್ತಿದ್ದರು ಇಲ್ಲಿನ ವಾಟರ್ ಮ್ಯಾನ್ ಗಳು ದಿನ ನಿತ್ಯ ಇದೆ ದಾರಿಯಲ್ಲಿ ಓಡಾಡುತ್ತಾ ಇದ್ದರು ಇತ್ತ ಗಮನ ಹರಿಸಿ ಸರಿಪಡಿಸುವಲ್ಲಿ ಗ್ರಾಮ ಪಂಚಾಯತ್ ವಿಪಲವಾಗಿದೆ. ಎಷ್ಟೋ ಕಡೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆದರೆ ಇಲ್ಲಿನ ಪಂಚಾಯತ್ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.