ಪಿವಿ ವಿಶೇಷ
ಕಾಂಚಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಹನೂರು : ಅಜ್ಜೀಪುರ ಸಮೀಪವಿರುವ ಕಾಂಚಳ್ಳಿ ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶ್ರೀನಿವಾಸ್ ಮತ್ತೆ ವೆಂಕಟಮ್ಮ ಮಾದೇವರಾಜಮನ್ ಇವರ ತೋಟದಲ್ಲಿ ಚಿರತೆ ನಡೆದು ಹೋಗಿರುವ ಹೆಜ್ಜೆ ಗುರುತು ಕಾಣಿಸಿ ಕೊಂಡಿದೆ ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ ಇಲ್ಲಿರುವ ರೈತರು ಚಿರತೆಯ ಭಯದಲ್ಲಿ ರಾತ್ರಿ ಸಮಯದಲ್ಲಿ ಹೊಲಗಳಿಗೆ ನೀರು ಹಾಯಿಸಲು ತುಂಬಾ ತೊಂದರೆಯಾಗುತ್ತಿದೆ ಮತ್ತೆ ಈ ರೈತನ ಜೀವಕ್ಕೆ ಬೆಲೆ ಇಲ್ಲದಂತಾಗಿದೆ, ಹಾಗೂ ಸರಿಯಾದ ಸಮಯಕ್ಕೆ ನಮಗೆ ಬೆಳಗಿನ ಜಾವ ವಿದ್ಯುತ್ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ ಕಾಡು ಪ್ರಾಣಿಗಳು ಅಪಾಯದಿಂದ ನಮಗೆ ರಕ್ಷಣೆ ನೀಡುತ್ತಿಲ್ಲವೆಂದು ರೈತ ಮುಖಂಡ ಕಾಂಚಳ್ಳಿ ಬಸವರಾಜು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.