ಪಿವಿ ವಿಶೇಷ

ರಾಜು ಆಲಗೂರಗೆ ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಎಚ್ಚರಿಸಿದ ಸಮುದಾಯ

ಪೊಲೀಸ್ ವಾರ್ತೆ ಚಡಚಣ . ಬರಲಿರುವ ವಿದಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ರಾಜು ಆಲಗೂರ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಅವರಿಗೆ ಟಕೆಟ್ ಕೈ ತಪ್ಪಿದರೆ ಜಿಲ್ಲೆಯಾದ್ಯಂತ ಎಸ್ ಸಿ ಬಲಗೈ ಸಮುದಾಯವು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್ ಸಿ ಘಟಕದ ಉದಾಧ್ಯಕ್ಷ ರಾಜು ಸಿಂಗೆ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಶಾದಿ ಮಹಲದಲ್ಲಿ ಆಯೋಜಿಸಲಾದ ಜಂಟಿಗೋಷ್ಟಿಯಲ್ಲಿ ಅವರು ಮಾತನಾಡಿದರು.ರಾಜು ಆಲಗೂರ ಅವರು ೧೯೯೦ ರಿಂದಲೂ ಅವಳಿ ಜಿಲ್ಲೆಯಲ್ಲಿ ಡಿಎಸ್ಸೆಸ್ ಸಂಘಟನೆ ಮೂಲಕ ಹತ್ತು ಹಲವು ಹೋರಾಟಗಳಿಂದ ಜನನಾಯಕರಾಗಿ ಬೆಳೆದವರು.ಇಲ್ಲಿಯವರೆಗೆ ಎರಡು ಬಾರಿ ಶಾಸಕರಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಮುದಾಯ ಅವರ ಬೆಂಬಲಕ್ಕೆ ಇದೆ. ಎಲ್ಲ ಸಮುದಾಯದರೊಂದಿಗೆ ಉತ್ತಮ ಬಂಧವ್ಯ ಹೊಂದಿರುವ ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೇಟ್ ನೀಡಬೇಕು ಎಂದು ಒಟ್ಟಾಯೋಸಿದ ಅವರು, ಶಾಸಕ ಎಂ.ಬಿ. ಪಾಟೀಲ ಅವರು ಸಹ ಆಲಗೂರ ಅವರಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಇವರನ್ನು ಲೋಕಸಭೆಗೆ ಸ್ಪರ್ಧಿಸಲು ತಿಳಿಸಿದ್ದರಿಂದ ವಿಧಾನಸಭೆಗೆ ಅವಕಾಶ ಸಿಗಲಿಲ್ಲ. ಹೀಗಿರುವಾಗ ಈ ಸಲವೂ ರಾಜು ಆಲಗೂರ ಅವರಿಗೆ ಟಿಕೆಟ್ ಕೈ ತಪ್ಪುವ ಮಾತುಗಳು ಕೇಳಿಬರುತ್ತಿದ್ದು, ಅದೇನಾದರೂ ನಿಜವಾದರೆ ತಾವೆಲ್ಲ ಆಲಗೂರ ಅವರ ಪರವಾಗಿ ನಿಂತು ಚುನಾವಣೆ ಯಲ್ಲಿ ತಕ್ಕ ಪಾಠ ಕಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಕಮಿಟಿ ಸಂಚಾಲಕರು ಹಾಗೂ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ವಕ್ತಾರ ವಕೀಲ ಜಗದೀಶ್ ಕಾಂಬಳೆ ಮಾತನಾಡಿ, ಜಿಲ್ಲೆಯಲ್ಲಿ 3.20 ಲಕ್ಷಕ್ಕೂ ಅಧಿಕ ಚಲವಾದಿ (ಬಲಗೈ) ಸಮುದಾಯವಿದೆ. ನಾಗಠಾಣ ಮತಕ್ಷೇತ್ರದಲ್ಲಿ 35 ಸಾವಿರಕ್ಕೂ ಅಧಿಕ ಚಲವಾದಿ ಸಮಾಜ ಬಾಂಧವರಿದ್ದಾರೆ. ಸಮಾಜದ ಬೆಂಬಲವುಳ್ಳ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ನಾಯಕರೂ, ಮಾಜಿ ಶಾಸಕರೂ ಆದ ರಾಜು ಆಲಗೂರ ಅವರಿಗೆ ನಾಗಠಾಣ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಬೇಕೆಂದು ತಾವು ಶಾಸಕ ಎಂ.ಬಿ.ಪಾಟೀಲ ಅವರಿಗೆ ಮತ್ತು ರಾಜ್ಯ ನಾಯಕರಿಗೆ ಆಗ್ರಹಿಸುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಟ್ಟೆಪ್ಪ ಬನಸೋಡೆ, ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ದಶರಥ ಬನಸೋಡೆ, ಸರ್ವೇಶ್ ಕಾಂಬಳೆ, ಸುರೇಶ್ ಕಾಂಬಳೆ, ರಾಜು ನಿಂಬರಗಿ, ಸಿದ್ದರಾಯ್ ಬನಸೋಡೆ, ಸುಶೀಲ ಬನಸೋಡೆ ಇದ್ದರು.

Related Articles

Leave a Reply

Your email address will not be published. Required fields are marked *

Back to top button