ಪಿವಿ ವಿಶೇಷ

ತಾಲೂಕಿನ ಅಭಿವೃದ್ಧಿಯೇ ನನ್ನ ಕನಸು ಎಂದು ಸಚಿವ ಕೆ ಸಿ ನಾರಾಯಣಗೌಡ ಅಭಿಪ್ರಾಯಪಟ್ಟರು

ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲೇನಹಳ್ಳಿ ಗ್ರಾಮದ ದೊಡ್ಡಕೆರೆಯ ಬಳಿ 22.50ಕೋಟಿ ರೂಪಾಯಿ ವೆಚ್ಚದ 12ಕೆರೆಗಳನ್ನು ತುಂಬಿಸಲು ಹೊಸದಾಗಿ ಹೊಳೆನರಸೀಪುರ ತಾಲೂಕಿನ ರಂಗೇನಹಳ್ಳಿ ಬಳಿ ಹೇಮಾವತಿ ನದಿಯಿಂದ ನೀರೆತ್ತುವ 2ನೇ ಹಂತದ ಏತನೀರಾವರಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ಧೇಶಿಸಿ ಮಾತನಾಡಿದರು.ನಾನು ಹಣ ಆಸ್ತಿ ಮಾಡಲು, ಸರ್ಕಾರದ ಹಣವನ್ನು ಲೂಟಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ರಾಜಕಾರಣದಲ್ಲಿ ಅಧಿಕಾರವು ನೀರ ಮೇಲಿನ ಗುಳ್ಳೆಯಿದ್ದಂತೆ ಎಂಬ ಸತ್ಯವು ನನಗೆ ಚೆನ್ನಾಗಿ ಗೊತ್ತಿರುವುದರಿಂದ ನಾನು ಸಚಿವನಾಗಿದ್ದರೂ ತಾಲೂಕಿನ ಜನತೆಯ ವಿನಮ್ರ ಸೇವಕನಂತೆ ಕೆಲಸ ಮಾಡುತ್ತಿದ್ದೇನೆ. ಇತಿಹಾಸದಲ್ಲಿ ರಂಗೇನಹಳ್ಳ ಏತನೀರಾವರಿ ಯೋಜನೆಯು 22.50ಕೋಟಿ ರೂಪಾಯಿ ವೆಚ್ಚದಲ್ಲಿ ಇಂದು ಭೂಮಿಪೂಜೆಯಾಗುತ್ತಿದೆ. ಈಗಾಗಲೇ ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆ-ಕಟ್ಟೆಗಳನ್ನು ತುಂಬಿಸಲು 212ಕೋಟಿ ವೆಚ್ಚದಲ್ಲಿ ಗೂಡೆಹೊಸಳ್ಳಿ ಏತನೀರಾವರಿ ಯೋಜನೆ ಸೇರಿದಂತೆ ಬೂಕನಕೆರೆ-ಶೀಳನೆರೆ ಹೋಬಳಿಯ ಕೆರೆ-ಕಟ್ಟೆಗಳನ್ನು ತುಂಬಿಸಲು ಕಟ್ಟಹಳ್ಳಿ ಬಳಿ ಏತನೀರಾವರಿ ಯೋಜನೆಯನ್ನು ೨೬೫ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಿ ನೀರಾವರಿ ಯೋಜನೆಯಿಂದ ವಂಚಿತವಾಗಿರುವ ಬರಡು ಭೂಮಿಗಳಲ್ಲಿಯೂ ಭತ್ತ, ರಾಗಿ, ಜೋಳ, ಕಬ್ಬು ಸೇರಿದಂತೆ ಬಂಗಾರವನ್ನು ಬೆಳೆಯುವಂತೆ ಕೆರೆಗಳನ್ನು ತುಂಬಿಸುವ ಶಾಶ್ವತವಾದ ಕಾರ್ಯಕ್ರಮವನ್ನು ನೀಡಿದ್ದೇನೆ. ಅನ್ನಧಾತನಾದ ರೈತನು ಸ್ವಾವಲಂಭಿಯಾಗಿ ನೆಮ್ಮದಿಯ ಜೀವನ ನಡೆಸಲು ಬೇಸಾಯ ಚಟುವಟಿಕೆಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡು ದುಡಿಯಲು ಬೇಕಾಗಿರುವುದು ನೀರು ಎಂಬ ಸತ್ಯವನ್ನು ಮನಗಂಡು ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಆಲೇನಹಳ್ಳಿ ಗ್ರಾಮದ ಶಿವನ ದೇವಾಲಯಕ್ಕೆ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷದವರು ಏನು ಸಹಾಯ ಮಾಡಿದ್ದಾರೆ ಕ್ಷೇತ್ರದ ಶಾಸಕನಾಗಿ ನಾನು ಏನು ಸಹಾಯ ನೀಡಿದ್ದೇನೆ ಎಂಬುದನ್ನು ಗ್ರಾಮದ ಮುಖಂಡರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ, ಕಳೆದ ಉಪಚುನಾವಣೆಯಲ್ಲಿ ಜನತೆಗೆ ಕೊಟ್ಟ ಮಾತಿನಂತೆ ಬಿಜೆಪಿ ಪಕ್ಷದಿಂದ ಗೆದ್ದು ಶಾಸಕನಾಗಿ ಮಂತ್ರಿಯಾದ ನಂತರ ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಮನೆ ಮನೆಗೆ ಗಂಗೆ ಯೋಜನೆಯನ್ನು 470ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನ ಮಾಡಿದ್ದೇನೆ. ಕ್ಷೇತ್ರದಾಧ್ಯಂತ 1800ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಕಾರ್ಯಗಳು ನಡೆದಿಲ್ಲ ಎಂಬುದನ್ನು ಸಾಭೀತುಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತನಾಗಿ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ತಾಲೂಕಿನ ಜನತೆಯ ಸೇವೆ ಮಾಡಿಕೊಂಡು ಕಾಲಕಳೆಯುತ್ತೇನೆ. ಟೀಕೆಟಿಪ್ಪಣಿಗಳಿಗೆ ಹಾಗೂ ಅಪಪ್ರಚಾರಗಳಿಗೆ ಹೆದರಿ ಓಡಿಹೋಗುವ ವ್ಯಕ್ತಿ ನಾನಲ್ಲ, ನನ್ನ ವಿರುದ್ಧ ಇಲ್ಲಸಲ್ಲದ ಟೀಕೆಟಿಪ್ಪಣಿ ಮಾಡಿ ಅಪಪ್ರಚಾರ ನಡೆಸಿದರೆ ನಾನೂ ಹೆದರಿ ಓಡಿ ಹೋಗಿ ಪಲಾಯನವಾದ ಅನುಸರಿಸುತ್ತೇನೆ ಎಂದು ನನ್ನ ರಾಜಕೀಯ ವಿರೋಧಿಗಳು ಭಾವಿಸಿದ್ದರೆ ಅವರ ಕನಸು ನನಸಾಗುವುದಿಲ್ಲ. ಏಕೆಂದರೆ ನನ್ನ ಜೀವದ ಕೊನೆಯ ಉಸಿರಿನವರೆಗೂ ಜನತೆಯ ಸೇವೆ ಮಾಡಿಕೊಂಡು ನನ್ನ ಜನ್ಮಭೂಮಿಯಲ್ಲಿಯೇ ಕೊನೆ ಉಸಿರೆಳೆಯುತ್ತೇನೆ ಅಲ್ಲದೇ ಕ್ಷೇತ್ರದ ಜನರು ನನ್ನ ಸೇವೆಯು ತಾಲೂಕಿಗೆ ಅವಶ್ಯಕತೆಯಿದೆ ಎನಿಸಿದರೆ ನನ್ನನ್ನು ಬೆಂಬಲಿಸಿ ಹರಸಿ ಆಶೀರ್ವಧಿಸಿ ನಿಮ್ಮ ಕೈ ಮೇಲೆತ್ತಿ ನನಗೆ ಬೆಂಬಲ ನೀಡಿ ಎಂದರುಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಪ್ರಥಮದರ್ಜೆ ಗುತ್ತಿಗೆದಾರ ಕಾಂತರಾಜು, ಸಚ್ಚಿನ್, ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಅಭಿಯಂತರ ಕಿಜರ್ ಅಹಮದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಣ್ಣನರಸಪ್ಪ, ಸಹಾಯಕ ಎಂಜಿನಿಯರ್ ಬಸವೇಗೌಡ, ಸಚಿವರ ಆಪ್ತಸಹಾಯಕ ದಯಾನಂದ, ಆಲೇನಹಳ್ಳಿ ಕುಮಾರ್, ರಾಚಪ್ಪಗೌಡ, ಬೀರವಳ್ಳಿ ಗ್ರಾಮಪಂಚಾಯಿತಿ ಮಾಜಿಅಧ್ಯಕ್ಷರಾದ ಚಂದ್ರಣ್ಣ, ಕುಮಾರ್, ರಾಮಕೃಷ್ಣೇಗೌಡ ಸೇರಿದಂತೆ ಉಪಸ್ಥಿತರಿದ್ದರು

ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

Related Articles

Leave a Reply

Your email address will not be published. Required fields are marked *

Back to top button