ರಾಜ್ಯ

ಶ್ರೀರಂಗಪಟ್ಟಣ: ವೀರಶೈವ ಲಿಂಗದೀಕ್ಷೆ ಪಡೆದ ವಿದೇಶಿ ಪ್ರಜೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಚಂದ್ರವನ ಆಶ್ರಮದಲ್ಲಿ ಭಾರತೀಯ ಮಹಿಳೆಯನ್ನು ವಿವಾಹವಾಗಿರುವ ವಿದೇಶಿ ಪ್ರಜೆ ತಾನು ಮತ್ತು ತನ್ನ ಪುತ್ರನಿಗೆ ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ವೀರಶೈವ ಲಿಂಗದೀಕ್ಷೆ ಪಡೆದುಕೊಂಡರು.ಯುನೈಟೆಡ್‌ಕಿಂಗ್‌ಡಮ್ ನಿವಾಸಿ ಯೋಕ್‌ಶೈರ್ ನಜಾನ್ ಮತ್ತು ಕ್ಯಾತರಿನ್ ದಂಪತಿಗಳ ಪುತ್ರ ಜಾರ್ಜ್ ರಿಚರ್ಡ್ ಸನ್, ಮೈಸೂರು ಯಾದವಗಿರಿ ನಿವಾಸಿ ನೀಲಾಂಬಿಕೆಯನ್ನು ಕೈ ಹಿಡಿದಿದ್ದು ಭಾರತೀಯ ಧರ್ಮಕ್ಕೆ ಬದಲಾಗಿರಲಿಲ್ಲ. ವೀರಶೈವ ಧರ್ಮದ ಆಚರಣೆಯಿಂದ ಪ್ರಭಾವಿತರಾದ ಅವರು ತನ್ನ ಪತ್ನಿ ನೀಲಾಂಬಿಕೆ ಜತೆಯಲ್ಲಿ ಆಶ್ರಮಕ್ಕೆ ಆಗಮಿಸಿ ತಾನು ಮತ್ತು ತನ್ನ ಪುತ್ರನಿಗೆ ಶ್ರೀಗಳಿಂದ ವೀರಶೈವ ಲಿಂಗಾಯಿತ ದೀಕ್ಷೆ ಪಡೆದುಕೊಂಡರು.ಜಾರ್ಜ್ ರಿಚರ್ಡ್‌ಸನ್ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಅವರ ಹೆಸರನ್ನು ಯೋಗೇಶ್ವರ್ ಎಂಬ ಹೆಸರಿಗೆ ಬದಲಾಯಿಸಿಕೊಂಡರು. ತನ್ನ ಒಂದು ವರ್ಷದ ಪುತ್ರನಿಗೆ ಗಜೇಂದ್ರ ಎಂದು ನಾಮಕರಣ ಮಾಡಿಸಿಕೊಂಡರು. ಶ್ರೀಗಳು ತಂದೆ ಹಾಗೂ ಪುತ್ರನಿಗೆ ವೀರಶೈವ ಧರ್ಮದ ಅನುಸಾರ ಲಿಂಗದೀಕ್ಷೆ ನೀಡಿದರು. ವೀರಶೈವ ಧರ್ಮದ ಬೋಧನೆ ಮಾಡಿದರು.”ದಂಪತಿಗಳು ಸ್ವ ಇಚ್ಚೆಯಿಂದ ಲಿಂಗದೀಕ್ಷೆ ಪಡೆದುಕೊಂಡಿದ್ದಾರೆ. ವೀರಶೈವ ಧರ್ಮದ ವಿಧಿ, ವಿಧಾನಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ,” ಎಂದು ಸ್ವಾಮೀಜಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button