ಹಾಸನದಲ್ಲಿ ಬಾಡೂಟಕ್ಕೆ ಕರೆಯದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ!
ಚೌಡೇಶ್ವರಿ ದೇಗುಲದಲ್ಲಿ ಪೂಜೆ ಮಾಡಿ ಬಾಡೂಟ ಆಯೋಜನೆ ಮಾಡಲಾಗಿತ್ತು. ಶರತ್ ಸಂಬಂಧಿಕರು ಪೂಜೆ ಮಾಡಿ ಬಾಡೂಟ ಏರ್ಪಡಿಸಿದ್ದರು. ತಮ್ಮನ್ನ ಕರೆಯದೇ ಹಬ್ಬದೂಟ ಮಾಡಿದ್ದೀರಾ ಎಂದು ಕ್ಯಾತೆ ಎತ್ತಿದ್ದಾರೆ.
ಹಾಸನ: ಬಾಡೂಟಕ್ಕೆ ಕರೆಯದ್ದಕ್ಕೆ ನಡೆದ ಜಗಳ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಪುರಲೆಹಳ್ಳಿಯಲ್ಲಿ ಶರತ್(28) ಎಂಬ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಚೌಡೇಶ್ವರಿ ದೇಗುಲದಲ್ಲಿ ಪೂಜೆ ಮಾಡಿ ಬಾಡೂಟ ಆಯೋಜನೆ ಮಾಡಲಾಗಿತ್ತು. ಶರತ್ ಸಂಬಂಧಿಕರು ಪೂಜೆ ಮಾಡಿ ಬಾಡೂಟ ಏರ್ಪಡಿಸಿದ್ದರು. ತಮ್ಮನ್ನ ಕರೆಯದೇ ಹಬ್ಬದೂಟ ಮಾಡಿದ್ದೀರಾ ಎಂದು ಕ್ಯಾತೆ ಎತ್ತಿದ್ದಾರೆ. ಅಲ್ಲದೇ ಪುರಲೆಹಳ್ಳಿಯ ಧನಪಾಲ್, ಅರ್ಜುನ್, ನಟರಾಜ್, ಮಂಜುನಾಥ ಮತ್ತಿತರಿಂದ ಶರತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಶರತ್, ರಾಕೇಶ್, ಯೋಗೇಶ್ ಎಂಬುವವರು ಹಲ್ಲೆಯಲ್ಲಿ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಶರತ್ನ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅರಸೀಕೆರೆ ತಾಲೂಕಿನ ಬಾಣಾವರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಕೊಲೆ ಕೇಸ್ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ :ಗದಗದಲ್ಲಿ ಯುವಕರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕ ಸಮೀರ್ ಶಾಪುರ(20) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಯುವಕ ಸಮೀರ್ ಶಾಪುರ ಮೃತಪಟ್ಟಿದ್ದು, ಮತ್ತೊಬ್ಬ ಗಾಯಾಳು ಶಮ್ಮಶಾನ್ ಪಠಾಣ(21) ಪರಿಸ್ಥಿತಿ ಗಂಭೀರವಾಗಿದೆ. ಪುರಸಭಾ ಕಚೇರಿ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ. ಮಚ್ಚು, ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ನರಗುಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.