ಸಮನ್ವಯ ಸಭೆಯನ್ನು ಯಶಸ್ವಿಯಾಗಿ ನಡೆಸಿದ: ತಹಶಿಲ್ದಾರ್ ಆನಂದಯ್ಯ,
ಹನೂರು: ಎಲ್ಲಾ ಗ್ರಾಮಸ್ತರು ಸಮನ್ವಯದಿಂದ ಬಾಳಬೇಕು ಆಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಕೆಲ ದಿನಗಳಹಿಂದೆ ಹುಯಿಲುನತ್ತ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಮೇಲ್ಧಿಕಾರಿಗಳಿಗೆ ತಿಳಿಸಿದರು ಅದರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಮ್ಮ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ಭಾಗವಹಿಸಿ ಯಶಸ್ವಿಯಾಗಿದ್ದೇವೆ ಎಂದು ಹನೂರು ತಾಲೂಕು ತಹಶಿಲ್ದಾರ್ ಆನಂದಯ್ಯ ತಿಳಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಹುಯಿಲುನತ್ತ ಗ್ರಾಮದ ಶಾಲೆ ಆವರಣದಲ್ಲಿ ಗ್ರಾಮಸ್ಥರ ಸಭೆಯನ್ನು ಮಾಡಲಾಗಿದೆ. ಸಭೆಯಲ್ಲಿ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಕಳೆದ ಆರು ತಿಂಗಳ ಹಿಂದೆ ಕೆ ಎಸ್ ಆರ್ ಟಿ ಸಿ ಬಸ್ ಅಪಘಾತದಿಂದ ಮೂರು ಜನರು ಮೃತಪಟ್ಟು ಹಲವಾರು ಜನರು ಗಂಭೀರ ಗಾಯಗೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಸೇತುವೆ ದುರಸ್ತಿ ಮತ್ತು ತಡೆಗೋಡೆ ಇಲ್ಲದಿರುವುದು. ಇನ್ನು ಮುಂದೆಯಾದರೂ ಇಂತಹ ಅವಘಡಗಳು ಸಂಭವಿಸದಂತೆ ಅಮೂಲ್ಯ ಜೀವಗಳನ್ನು ಉಳಿಸಲು ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.ಗ್ರಾಮಸ್ಥ ನಿಂಗಶೆಟ್ಟಿ ಮಾತನಾಡಿ ಹುಯಿಲುನತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಹಾಳಾಗಿದ್ದು, ರಸ್ತೆ ಮಧ್ಯದ ಸೇತುವೆ ಗುಂಡಿಬಿದ್ದ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ದಿನನಿತ್ಯ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಅವ್ಯವಸ್ಥೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸುವ ಮೊದಲು ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡಿಕೊಡಬೇಕು. ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ತಿಳಿಸಿದರು. ಗ್ರಾಮದ ಮುಖಂಡ ಮಲ್ಲಪ್ಪ ಮಾತನಾಡಿ ನಮ್ಮ ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದು ಕಂಡಿತ. ಕಾಡಂಚಿನಲ್ಲಿ ವಾಸಮಾಡುವ ನಾವು ಕಾಡು ಪ್ರಾಣಿಗಳ ಹಾವಳಿ ಅಸಮರ್ಪಕ ವಿದ್ಯುತ್ ನಿಂದ ತುಂಬಾ ನಷ್ಟ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ತಹಶಿಲ್ದಾರ್ ತತ್ ಕ್ಷಣದಲ್ಲಿ ಸೇತುವೆ ತಾತ್ಕಾಲಿಕ ದುರಸ್ತಿಪಡಿಸಲು ಪಿಡಬ್ಲ್ಯೂಡಿ ಇಂಜಿನಿಯರ್ ರವರಿಗೆ ಸೂಚಿಸಿದರು. ಉಳಿದಂತೆ ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು ಅಲ್ಲದೆ ಯಾವುದೇ ಕಾರಣಕ್ಕೂ ಚುನಾವಣೆಯನ್ನು ಬಹಿಷ್ಕರಿಸಬಾರದು ಅದು ನಿಮ್ಮ ಹಕ್ಕು ಪ್ರತಿಯೋಬ್ಬರು ಪಾಲ್ಗೊಳ್ಳಲು ಗ್ರಾಮಸ್ಥರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ಪಿಡಬ್ಲ್ಯೂಡಿ ಇಂಜಿನಿಯರ್ ರಾಜೇಶ್ ಮುನ್ಸಿ, ಚೆಸ್ಕಾಂ ಇಂಜಿನಿಯರ್ ರಂಗಸ್ವಾಮಿ, ಉಪತಹಸಿಲ್ದಾರ್ ವೆಂಕಟೇಶ್, ರಾಜಸ್ವ ನಿರೀಕ್ಷಕ ಮಾದೇಶ್, ಪಿ ಡಿ ಓ ನಂಜುಂಡಸ್ವಾಮಿ, ಗ್ರಾಮಲೆಕ್ಕಿಗ ಲಿಂಗರಾಜು,ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು