ಪಿವಿ ವಿಶೇಷ
ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
ಚಾಮರಾಜನಗರ: ತಾಲೂಕಿನ ಬದನಗುಪ್ಪೆ ಸಮೀಪ ರೈಲು ಹಳಿಗೆ ತಲೆ ಕೊಟ್ಟು ಯುವಕನೋಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದಾಸನೂರು ಗ್ರಾಮದ ರವಿಕಿರಣ್ (27) ಮೃತ ಯುವಕ. ಯುವಕನ ತಲೆ ದೇಹದಿಂದ ಬೇರ್ಪಟ್ಟಿದ್ದು, ರೈಲು ಹರಿದ ರಭಸಕ್ಕೆ ತಲೆ ಹಳಿಯಿಂದ ತುಂಬಾ ದೂರ ಬಿದ್ದಿತ್ತು. ರೈಲು ಹಳಿಯ ಬಳಿಯೇ ತನ್ನ ಬೈಕ್ ನಿಲ್ಲಿಸಿ ರೈಲು ಬರುವುದನ್ನು ನೋಡಿಕೊಂಡು ಹಳಿಗೆ ತಲೆ ಕೊಟ್ಟಿದ್ದಾನೆ ಎನ್ನಲಾಗಿದೆ.ನಂಜನಗೂಡು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಚಾಮರಾಜನಗರದ ಸಿಮ್ಸ್ ಗೆ ಕಳುಹಿಸಿ ಪ್ರಕರಣ ದಾಖಲಿಸಿದ್ದಾರೆ.